ಅಂಗನವಾಡಿ, ಅಕ್ಷರ, ಆಶಾ ಕಾರ್ಯಕರ್ತೆಯರ ಬೃಹತ್​ ಪ್ರತಿಭಟನೆ

ತುಮಕೂರಿನ ಸಂಸದರ ಕಚೇರಿ ಮುಂಭಾಗದ ುಟ್​ ಪಾತ್​ ಮೇಲೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಸಿ ರಾಜ್ಯ ಅಂಗನವಾಡಿ ನೌಕರರ ಸಂಘ,  ಅಕ್ಷರ ದಾಸೋಹ ನೌಕರರ ಸಂಘ, ಅಶಾ ಕಾರ್ಯಕರ್ತೆಯರ ಸಂಘದ ನೂರಾರು ಕಾರ್ಯಕರ್ತೆಯರು ಪ್ರತಿಭಟನಾ ಧರಣಿ ನಡೆಸಿದರು.
ತುಮಕೂರಿನ ಸಂಸದರ ಕಚೇರಿ ಮುಂಭಾಗದ ುಟ್​ ಪಾತ್​ ಮೇಲೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಸಿ ರಾಜ್ಯ ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಅಶಾ ಕಾರ್ಯಕರ್ತೆಯರ ಸಂಘದ ನೂರಾರು ಕಾರ್ಯಕರ್ತೆಯರು ಪ್ರತಿಭಟನಾ ಧರಣಿ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು ನೇತೃತ್ವದಲ್ಲಿ ಹೋರಾಟ
  • ಸಂಸದ ಸೋಮಣ್ಣ ಕಚೇರಿ ಮುಂಭಾಗ ಪ್ರತಿಭಟನೆಗೆ ನಿರಾಕರಣೆ
  • ವಿವಿಧ ಬೇಡಿಕೆ ಈಡೇರಿಕೆಗೆ ತುಮಕೂರು ಟೌನ್​ಹಾಲ್​ನಲ್ಲಿ ಧರಣಿ
ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಸಿ ರಾಜ್ಯ ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಅಶಾ ಕಾರ್ಯಕರ್ತೆಯರ ಸಂಘದ ನೂರಾರು ಕಾರ್ಯಕರ್ತೆಯರು ತುಮಕೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದು ಟೌನ್​ಹಾಲ್​ ಮುಂಭಾಗ ಧರಣಿ ಮುಂದುವರಿಸಿದರು.
ಸಿಐಟಿಯು ನೇತೃತ್ವದಲ್ಲಿ ಸಮಾವೇಶಗೊಂಡಿದ್ದ ರಾಜ್ಯದೆಲ್ಲೆಡೆಯ ಸಾವಿರಾರು ಸ್ಕೀಂ ನೌಕರರು ನಗರದ ಕೇಂದ್ರ ಸಚಿವ ವಿ.ಸೋಮಣ್ಣ ಕಚೇರಿ ಮುಂಭಾಗ ಪ್ರತಿಭಟನೆಗೆ ಮುಂದಾದರು, ಪೊಲೀಸರು ಅಲ್ಲಿ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜಿಎಸ್​ ವೃತ್ತದಲ್ಲಿ ಧರಣಿ ಮುಂದುವರಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಸೈಯದ್​ ಮುಜೀಬ್​ ಮಾತನಾಡಿ, ಜನೋಪಯೋಗಿ ಯೋಜನೆಗಳಿಗೆ ಅನುದಾನ ಕಡಿತ ಮಾಡುವ ಕೇಂದ್ರ ಸರ್ಕಾರ ಜನತೆಯ ತೆರಿಗೆ ಹಣವನ್ನು ವಿವಿಧ ಯೊಜನೆಗಳ ನೆಪದಲ್ಲಿ ಶ್ರೀಮಂತ ಕಾಪೋರೇಟ್​ ಬಂಡವಾಳಶಾಹಿಗಳಿಗೆ ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಬಡಜನರು ಮತ್ತು ಅವರ ಪರ ಇರುವ ಯೋಜನೆಗಳಾದ ಐಸಿಡಿಎಸ್​. ಬಿಸಿಊಟದಂತಹ ಯೋಜನೆಗಳಿಗೆ ಅನುದಾನ ಹೆಚ್ಚಳ ಮಾಡಿಲ್ಲ ಎಂದು ದೂರಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮುನಿರಾಜು ಮಾತನಾಡಿ, ಸ್ಕೀಮ್​ ನೌಕರರಿಗೆ ಕನಿಷ್ಟ ಕೂಲಿ ನೀಡದೆ ದುಡಿಸುವುದು ಅಮಾನವಿಯವಾದದ್ದು, ಅಂಗನವಾಡಿ, ಬಿಸಿಊಟ, ಆಶಾ ನೌಕರರನ್ನು ಒಳಗೊಂಡಂತೆ ದುಡಿವ ಜನರಿಗೆ ದ್ರೋಹ ಬಗೆಯುವ 4 ಕಾರ್ಮಿಕ ಸಂಹಿತೆಗಳು ರದ್ದುಮಾಡಬೆಕು.. ದುಡಿವ ಜನರಿಗೆ ಶಾಸನ ಬದ್ದ ಸವಲತ್ತುಗಳನ್ನು ನಿರಾಕರಿಸುವ "ಶ್ರಮಶಕ್ತಿ ನೀತಿ' 2025 ಬೇಡ ಎಂದರು.
ಅಂಗನವಾಡಿ, ಬಿಸಿಊಟ, ಆಶಾ, ನೌಕರರಿಗೂ ಮುಟ್ಟಿನ ರಜೆ ನೀಡಬೇಕು. 56 ಲಕ್ಷ ಸ್ಕೀಮ್​ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಿ. 2018 ರಿಂದ ಅಂಗನವಾಡಿ, ಬಿಸಿಊಟ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ, ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2700ರೂ., ಸಹಾಯಕಿಗೆ 1350 ರೂಗಳನ್ನು ಮಾತ್ರವೇ ನೀಡುತ್ತಿದೆ. 2009 ರಿಂದಬಿಸಿಊಟ ನೌಕರಿಗೆ ಕೇವಲ 600ರೂ. ಗಳಿಗೆ ದುಡಿಸಲಾಗುತ್ತಿದೆ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು, ಯಾವುದೇ ಸ್ವರೂಪದಲ್ಲಿಯೂ ಬಿಸಿಯೂಟವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು, ಕಾರ್ಯಸಾಧುವಲ್ಲದ ಈಖಖ ನ್ನು ರದ್ದು ಮಾಡಬೇಕು. ಇಲ್ಲದಿದ್ದಲ್ಲಿ 6 ತಿಂಗಳಿಗೊಮ್ಮೆ ಈಖಖ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈಪೈ ವ್ಯವಸ್ಥೆ ನೀಡಬೇಕು.ಋಅಆಖ, ಬಿಸಿಊಟ ನೌಕರರನ್ನು ಖಾಯಂ ಮಾಡಬೇಕು ಅ ತನಕ ಪ್ರತ್ಯೇಕ ನಿರ್ದೇಶಾನಾಲಯವನ್ನು ರಚಿಸಬೇಕು ಎಂದು ಸಿಐಟಿಯು ಮುಖಂಡ ವಸಂತಚಾರಿ ಆಗ್ರಹಿಸಿದರು.
18 ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಿಲ್ಲ, ಕೂಡಲೇ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಮತ್ತು ಸ್ಥಳಿಯ ಆಹಾರ-ಪದಾರ್ಥಗಳನ್ನು ನೀಡಬೇಕು.ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಂದ ಬಿಡುಗಡೆಗೊಳಿಸಬೇಕು. ಋಐಅ ಶಿಫಾರಸ್ಸಿನಂತೆ ಇವರನ್ನು ಉದ್ಯೋಗಸ್ಥರೆಂದೂ ಪರಿಗಣಿಸಿ ಶಾಸನ ಬದ್ಧಾ ಸೌಲಭ್ಯಗಳನ್ನು ಕೊಡಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಎನ್​.ಕೆ.ಸುಬ್ರಮಣ್ಯ ಒತ್ತಾಯಿಸಿದರು.
ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು. ಎಲ್ಲಾ ಸ್ಕಿಮ್​ ನೌಕರರಿಗೆ ಮಾಸಿಕ 10 ಸಾವಿರ ನಿವೃತ್ತಿ ವೇತನ ನೀಡಬೇಕು. ಬಿಸಿಯೂಟ ನೌಕರರಿಗೆ ಆರೋಗ್ಯ ವಿಮೆ ಜಾರಿ ಮಾಡಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಖಜಾಂಚಿ ಜಿ.ಕಮಲ ಆಗ್ರಹಿಸಿದರು.
ಅಂಗನವಾಡಿ ನೌಕರರ ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್​ಬಾನು, ಬಿಸಿಯೂಟ ನೌಕರರ ಸಂಘದ ಹನುಮಕ್ಕ, ನಿಂಗಮ್ಮ ಮಾತನಾಡಿದರು.
ಪ್ರತಿಭಟನೆಯಲ್ಲಿ ಚಿತ್ರದುರ್ಗ, ಶಿವಮೊಗ್ಗ. ದಕ್ಷಿಣ ಕನ್ನಡ, ಬಳ್ಳಾರಿ. ವಿಜಯನಗರ, ಉಡುಪಿ ಜಿಲ್ಲೆಗಳ ಅಂಗನವಾಡಿ. ಬಿಸಿಊಟ, ಅಶಾ ಕಾರ್ಯಕರ್ತೇಯರು ಭಾಗವಹಿಸಿದ್ದಾರೆ.
ಬಳ್ಳಾರಿ ಉಮಾ, ಈರಮ್ಮ. ಮಲ್ಲಮ್ಮ. ಉಡುಪಿ ಭಾರತಿ, ಶಾಂತ, ಚಿತ್ರದುರ್ಗದ ನಿರ್ಮಲ, ಮಂಜುಳ, ಕಲ್ಯಾಣಮ್ಮ. ವಿಜಯನಗರದ ನಾಗರತ್ನ, ಸಪ್ನ, ಮಾರಕ್ಕ, ಬಿಸಿಊಟ ನೌಕರರ ಸಂಘ ತುಮಕೂರಿನ ಕೆಂಚಮ್ಮ. ನಾಗರತ್ನ, ಬಳ್ಳಾರಿ ದುರ್ಗಮ್ಮ. ಗೌರಮ್ಮ, ನಾಗರತ್ನ, ದುರ್ಗದ ಶಿವಮ್ಮ, ರಾಜಮ್ಮ ವಿಜಯನಗರ ಗೌರಮ್ಮ. ಸುಮಾ ಯಶೋಧ, ಶಿವಮೊಗ್ಗದ ಸುನಿತಾ. ದಕ್ಷಿಣ ಕನ್ನಡದ ಭವ್ಯ ಮತ್ತಿತರು ನೇತೃತ್ವ ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net