ಕಂದಾಯ ಪ್ರಕರಣಗಳ ವಿಚಾರಣೆಗೆ ಸಮಯ ನಿಗದಿ ಪಡಿಸಿ

ತುಮಕೂರಿನ ಜಿಲ್ಲಾ ವಕೀಲರ ಸಂಘದ ವತಿಯಿಂದ ಕಂದಾಯ ಇಲಾಖೆ ನ್ಯಾಯಾಲಯಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಗೆ ನಿಗದಿತ ಸಮಯ ಅಳವಡಿಸುವಂತೆ ಒತ್ತಾಯಿಸಲಾಯಿತು. ಹಿರೇಹಳ್ಳಿ ಮಹೇಶ್​, ಬಿ.ಎಂ.ಸಿಂಧು, ಎಂ.ಬಿ.ಚೇತನ್​ ಕುಮಾರ್​, ರವಿ, ಶಿವಾರಜು, ಗೋವಿಂದರಾಜು ಮತ್ತಿತರರು ಇದ್ದರು.
ತುಮಕೂರಿನ ಜಿಲ್ಲಾ ವಕೀಲರ ಸಂಘದ ವತಿಯಿಂದ ಕಂದಾಯ ಇಲಾಖೆ ನ್ಯಾಯಾಲಯಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಗೆ ನಿಗದಿತ ಸಮಯ ಅಳವಡಿಸುವಂತೆ ಒತ್ತಾಯಿಸಲಾಯಿತು. ಹಿರೇಹಳ್ಳಿ ಮಹೇಶ್​, ಬಿ.ಎಂ.ಸಿಂಧು, ಎಂ.ಬಿ.ಚೇತನ್​ ಕುಮಾರ್​, ರವಿ, ಶಿವಾರಜು, ಗೋವಿಂದರಾಜು ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ವಕೀಲರ ಸಂಘದ ಮನವಿ
  • ಡಿಸಿ ಕಚೇರಿ ಬಳಿ ಪ್ರತಿಭಟನೆ
  • ಹಿರೇಹಳ್ಳಿ ಮಹೇಶ್​ ನೇತೃತ್ವ
ತುಮಕೂರು: ಜಿಲ್ಲೆಯ ಕಂದಾಯ ಇಲಾಖೆ ನ್ಯಾಯಾಲಯಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಗೆ ನಿಗದಿತ ಸಮಯ ಅಳವಡಿಸುವಂತೆ ಒತ್ತಾಯಿಸಿ ಜಿಲ್ಲಾ ವಕೀಲರ ಸಂಘ ಮನವಿ ಮಾಡಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಕಂದಾಯ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್​ ನೇತೃತ್ವದಲ್ಲಿ ಡಿಸಿ, ಎಸಿ, ತಹಸೀಲ್ದಾರ್​ ಕೋರ್ಟ್​ಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಯನ್ನು ಬೇರೆ, ಬೇರೆ ಸಮಯಗಳಲ್ಲಿ ತೆಗೆದುಕೊಳ್ಳುತ್ತಿರುವುದನ್ನು ವಿರೋಧಿಸಿದ್ದಲ್ಲದೆ, ಅದಕ್ಕೆ ಸಮಯ ನಿಗಧಿ ಪಡಿಸುವಂತೆ ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದ ಹಿರೇಹಳ್ಳಿ ಮಹೇಶ್​, ಕಂದಾಯ ನ್ಯಾಯಾಲಯಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಗೆ ಬೇರೆ, ಬೇರೆ ಸಮಯಗಳನ್ನು ನಿಗಧಿ ಮಾಡುತ್ತಿರುವುದರಿಂದ ವಕೀಲರು ಕಲಾಪಗಳಲ್ಲಿ ಭಾಗಿಯಾಗಲು ತೀವ್ರ ತೊಂದರೆ ಆಗುತ್ತಿದೆ. ಹಾಗಾಗಿ, ಮಧ್ಯಾಹ್ನ 3 ಗಂಟೆಗೆ ಪ್ರಕರಣಗಳ ವಿಚಾರಣೆಗೆ ಸಮಯ ನಿಗಧಿ ಮಾಡಲು ಜಿಲ್ಲೆಯ ಎಲ್ಲಾ ಕಂದಾಯ ಇಲಾಖೆಗಳ ನ್ಯಾಯಾಲಯಗಳಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ವಕೀಲರ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ, ಜಿಲ್ಲೆಯ ಎಲ್ಲಾ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ಕಂದಾಯ ಪ್ರಕರಣಗಳ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ತೆಗೆದುಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಕಂದಾಯ ಇಲಾಖೆ ನ್ಯಾಯಾಲಯಗಳಿಗೆ ಲಿಖಿತ ರೂಪದಲ್ಲಿ ನಿರ್ದೇಶನ ನೀಡಲಾಗುವುದು ಎಂದು ಭರವಸೆಯಿತ್ತರು.
ಇದೇ ಸಂದರ್ಭದಲ್ಲಿ ಪ್ರಕರಣಗಳ ವಿಚಾರಣೆಯನ್ನು ಮುಂದೂಡುವುದಾದರೆ ಒಂದು ದಿನ ಮುಂಚಿತವಾಗಿ ತಿಳಿಸಲು ಮತ್ತು ಪ್ರಕರಣಗಳ ಪಟ್ಟಿಯನ್ನು ಮಧ್ಯಾಹ್ನ 12 ಗಂಟೆಯೊಳಗೆ ಪ್ರಚಾರಪಡಿಸುವಂತೆ ಹಿರೇಹಳ್ಳಿ ಮಹೇಶ್​ ಅಪರ ಜಿಲ್ಲಾಧಿಕಾರಿಗಳನ್ನು ಕೋರಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಖಜಾಂಚಿ ಬಿ.ಎಂ.ಸಿಂಧು, ರವಿ, ಪ್ರಸನ್ನ, ಎಂ.ಬಿ.ಚೇತನ್​ ಕುಮಾರ್​, ಶಿವರಾಜು, ಗೋವಿಂದರಾಜು ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net