ಆದಿಜಾಂಬವ ಪೀಠಾಧ್ಯಕ್ಷ ಷಡಕ್ಷರಿ ಸ್ವಾಮೀಜಿ ಅಸ್ವಸ್ಥ !

 ಪಾದಯಾತ್ರೆ ವೇಳೆ ಅಸ್ವಸ್ಥಗೊಂಡ ಷಡಕ್ಷರಿ ಸ್ವಾಮೀಜಿ ಅವರನ್ನು ಸಿದ್ದಗಂಗಾ ಆಸ್ಪತ್ರೆಯಲ್ಲಿ ಎಸ್ಪಿ ಕೆ.ವಿ.ಅಶೋಕ್​ ಭೇಟಿ ಮಾಡಿದರು.
ಪಾದಯಾತ್ರೆ ವೇಳೆ ಅಸ್ವಸ್ಥಗೊಂಡ ಷಡಕ್ಷರಿ ಸ್ವಾಮೀಜಿ ಅವರನ್ನು ಸಿದ್ದಗಂಗಾ ಆಸ್ಪತ್ರೆಯಲ್ಲಿ ಎಸ್ಪಿ ಕೆ.ವಿ.ಅಶೋಕ್​ ಭೇಟಿ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ, ಚೇತರಿಕೆ
  • ಒಳಮೀಸಲಾತಿ ಜಾರಿಗೆ ಬೆಂಗಳೂರಿಗೆ ಪಾದಯಾತ್ರೆ
  • ಹರಿಹರದಿಂದ ಆರಂಭವಾದ ಸ್ವಾಮೀಜಿ ಹೋರಾಟ
ತುಮಕೂರು: ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಸ್ಮಾರಕ ಸ್ಥಳದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ ವರೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಆದಿ ಜಾಂಬವ ಮಠದ ಪೀಠಾಧ್ಯಕ್ಷ ಷಡಕ್ಷರಿ ಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಸಂಜೆ ತುಮಕೂರು ನಗರ ಪ್ರವೇಶಿಸಿದೆ. ಸೋಮವಾರ ಬೆಳಗ್ಗೆ ಪಾದಯಾತ್ರೆ ಮುಂದುವರೆಸಿದ ಸ್ವಾಮೀಜಿ ಅಸ್ವಸ್ಥಗೊಂಡ ಹಿನ್ನೆಲೆ ತಕ್ಷಣವೇ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಯಿತು.
ಸುಮಾರು 300 ಕಿಲೋ ಮೀಟರ್​ ನಿಂದ ಪಾದಯಾತ್ರೆ ಕೈಗೊಂಡಿರುವ ಸ್ವಾಮೀಜಿ ತೀವ್ರ ಬಳಲಿದ್ದು ಅದರ ನಡುವೆಯೂ ಬೆಂಗಳೂರಿನತ್ತ ಪಾದಯಾತ್ರೆ ಮುಂದುವರೆಸಿದ್ದು ಈ ವೇಳೆ ಕುಸಿದು ಕುಳಿತಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಸ್ವಾಮೀಜಿ ಹೋರಾಟ ಕೈಬಿಡದೆ ಬಿಸಿಲನ್ನು ಲೆಕ್ಕಿಸದೇ ಮತ್ತೆ ಪಾದಯಾತ್ರೆ ಮುಂದುವರೆಸಿದರು.
ಎಸ್ಪಿ ಭೇಟಿ: ಪಾದಯಾತ್ರೆಯಿಂದ ಬಳಲಿ ಅಸ್ಚಸ್ಥರಾಗಿ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಷಡಕ್ಷರಿ ಸ್ವಾಮೀಜಿ ಅವರನ್ನ ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಆಶೋಕ್​ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಒಳ ಮೀಸಲಾತಿಯ ವಿರೋಧಿಗಳ ಮಾತಿಗೆ ಸಿಎಂ ಸಿದ್ದರಾಮಯ್ಯ ಮಣಿದಿದ್ದಾರೆ. 35 ವರ್ಷಗಳಿಂದ ಮೀಸಲಾತಿ ಜಾರಿಗಾಗಿ ಹಸಿದಿರುವ ಮಾದಿಗರಿಗೆ ಅನ್ನ ನೀಡುವ ಸಿದ್ದರಾಮಯ್ಯ ಅವರು ಮಾ.27ಕ್ಕೆ ಸಂಪೂರ್ಣ ಒಳ ಮೀಸಲಾತಿ ಘೋಷಣೆ ಮಾಡದೇ ಹೋದಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾದಿಗರು ದಂಗೆ ಏಳುತ್ತಾರೆ.
ಷಡಕ್ಷರಿ ಸ್ವಾಮೀಜಿ
ಆದಿಜಾಂಬವ ಮಠದ ಪೀಠಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net