

ಜಗನ್ನಾಥ್ ಕಾಳೇನಹಳ್ಳಿ
ತುಮಕೂರು: ನಗರದ ಹೃದಯಭಾಗದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬರೋಬ್ಬರಿ 7 ಕೋಟಿ ರೂ., ವೆಚ್ಚದಲ್ಲಿ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸುತ್ತಿರುವ "ಔಟ್ಡೊರ್ ಎಲ್ಇಡಿ ಡಿಸ್ಪ್ಲೇ ಬೋರ್ಡ್'ಲೋಕಾರ್ಪಣೆಗೆ ಸಮರೋಪಾದಿ ಸಿದ್ಧತೆ ನಡೆದಿದೆ.
ಮಾಜಿ ಪ್ರಧಾನಿ ಪಂಡಿತ್ ಜವಹರ ಲಾಲ್ ನೆಹರು ಜನ್ಮದಿನವಾದ ನ.14ರ ಮಕ್ಕಳ ದಿನಾಚರಣೆಯಂದೇ ಎಸ್ಎಸ್ ಸ್ಕ್ವೇರ್ ಉದ್ಘಾಟನೆಗೆ ಜಿಲ್ಲಾಡಳಿತ ತಯಾರಿ ನಡೆಸಿರುವುದು ವಿಶೇಷವೆನಿಸಿದೆ. ಈ ಮಧ್ಯೆ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಮಾದರಿಯ ಈ ಯೋಜನೆ "ಹೆಸರು' ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ ಹಿನ್ನೆಲೆ ಸಿದ್ದಗಂಗಾ ಮಠದ ಮಕ್ಕಳ ಸಮ್ಮುಖದಲ್ಲೇ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿ ಕಳೆದ 2 ತಿಂಗಳಿನಿಂದ ಎದ್ದಿರುವ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ.
ಹಗಲಿರುಳು ಕಾಮಗಾರಿ: ಈ ಬಾರಿಯ ತುಮಕೂರು ದಸರಾ ಸಂದರ್ಭದಲ್ಲಿ ರಾಜ್ಯದಲ್ಲೇ ಎನು ದೇಶದಲ್ಲೇ ಪ್ರಪ್ರಥಮ ಎನಿಸಿದ "ಔಟ್ಡೋರ್ ಎಲ್ಇಡಿ ಡಿಸ್ಪ್ಲೇ ಬೋರ್ಡ್'ಅಳವಡಿಸುವ ಯೋಜನೆಯನ್ನು 7 ಕೋಟಿ ರೂ., ವೆಚ್ಚದಲ್ಲಿ ಕೈಗೆತ್ತಿಕೊಂಡಿತ್ತು. ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ಮಾದರಿಯ ಈ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಅಳವಡಿಸುವ ಯೋಜನೆಯನ್ನು ಸ್ಯಾಮ್ಸನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟ್ರಾನ್ಸ್ ಾಮರ್ಮೇಷನ್ ಪೆವೇಟ್ ಲಿಮಿಟೆಡ್ ವಹಿಸಿಕೊಟ್ಟಿದ್ದು ಕಳೆದ ಎರಡು ತಿಂಗಳನಿಂದ ಹಗಲಿರುಳು ಕಾಮಗಾರಿಯಲ್ಲಿ ತೊಡಗಿರುವುದರಿಂದ ಲೋಕಾರ್ಪಣೆ ಹಂತಕ್ಕೆ ಬಂದಿದೆ.
710 ಚದದ ಮೀಟರ್ ಬೃಹತ್ ಎಲ್ಇಡಿ ಪರದೆಯನ್ನು 20 ಅಡಿ ಎತ್ತರದ ಬೃಹತ್ ಪೋಲ್ಗಳನ್ನು ಅಳವಡಿಸಿ ಹಾಕಲಾಗಿದೆ. 20 ಅಡಿ ಎತ್ತರದ ಬೃಹತ್ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡ್ (ಎಲ್ಇಡಿ) ಅಳವಡಿಸಿದ್ದು ರಾತ್ರಿವೇಳೆ ಪರೀಾರ್ಥ ವಿಡಿಯೋ ತುಣುಕಗಳನ್ನು ಎಲ್ಇಡಿ ಪರದೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಐಪಿ68 ವಾಟರ್್ರೂಪ್ ಎಲ್ಇಡಿ ಇದಾಗಿದ್ದು ಮಳೆ, ಗಾಳಿ, ಬಿಸಿಲಿಗು ಜಗ್ಗುವುದಿಲ್ಲ.
7 ಕೋಟಿ ವೆಚ್ಚದ ಎಲ್ಇಡಿ ಡಿಸ್ಪ್ಲೇ ಬೋರ್ಡ್ !
ಈ ಬಾರಿಯ ತುಮಕೂರು ದಸರಾ ಉತ್ಸವಕ್ಕೆ ದೇಶದಲ್ಲೇ ಪ್ರಪ್ರಥಮ ಎನಿಸಿರುವ ಔಟ್ಡೋರ್ ಎಲ್ ಇಡಿ ಡಿಸ್ಪ್ಲೇ ಬೋರ್ಡ್' ಲೋಕಾರ್ಪಣೆಗೆ ಜಿಲ್ಲಾಡಳಿತ ತರಾತುರಿ ಸಿದ್ಧತೆ ನಡೆಸಿತ್ತು. ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ಮಾದರಿಯ ಈ 7 ಕೋಟಿ ವೆಚ್ಚದ "ಎಸ್ಎಸ್ ಸ್ಕ್ವೇರ್' ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ನಗರಾಭಿವೃದ್ಧಿ ವತಿಯಿಂದ ನಿರ್ಮಿಸಲಾಗುತ್ತಿದ್ದು ಸ್ಯಾಮ್ಸನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟ್ರಾನ್ಸ್ ಾಮರ್ಮೇಷನ್ ಪೆವೇಟ್ ಲಿಮಿಟೆಡ್ ಇದರ ನಿರ್ಮಾಣ, ನಿರ್ವಹಣೆ, ಕಾರ್ಯಾಚರಣೆ ಉಸ್ತುವಾರಿ ವಹಿಸಿದೆ. 20 ಅಡಿ ಎತ್ತರದ ಬೃಹತ್ ಪೋಲ್ಗಳನ್ನು ಅಳವಡಿಸಿ ಅದಕ್ಕೆ 20 ಅಡಿ ಎತ್ತರದ ಬೃಹತ್ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡ್ (ಎಲ್ಇಡಿ) ಅಳವಡಿಸಲಾಗಿದೆ. ಎಲ್ಲ ದಿಕ್ಕುಗಳಿಗೆ ಕಾಣುವಂತೆ ಈ ಎಲ್ಇಡಿ ಪರದೆ ಇದ್ದು ಸರ್ಕಾರಿ ಯೋಜನೆಗಳು, ಪ್ರವಾಸಿ ಸ್ಥಳಗಳು ಹೀಗೆ ಜಾಹೀರಾತುಗಳನ್ನು ಡಿಸ್ಪ್ಲೇ ಬೋರ್ಡ್ನಲ್ಲಿ ಪ್ರದರ್ಶಿಸಬಹುದು.
ಕೊನೆಕ್ಷಣದಲ್ಲಿ "ಆಹ್ವಾನ' ಕೈಬಿಟ್ಟ ಜಿಲ್ಲಾಡಳಿತ ?
ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಅಳವಡಿಸಿರುವ ಎಲ್ಇಡಿ ಡಿಜಿಟಲ್ ಲಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನು ಆಹ್ವಾನಿಸುವ ಪ್ರಕ್ರಿಯೆಯನ್ನು ಶನಿವಾರ ಕೊನೆಕ್ಷಣದಲ್ಲಿ ಕೈಬಿಟ್ಟಿದೆ. ನ.8ರಂದು ಸಂಜೆ 7.30ಕ್ಕೆ ಎಲ್ಇಡಿ ಡಿಜಿಟಲ್ ಲಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದು ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಮಹಾನಗರ ಪಾಲಿಕೆ ವತಿಯಿಂದ ಆಹ್ವಾನಿಸುವ ಪತ್ರಗಳನ್ನು ಟೈಪಿಸಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಜಿಲ್ಲಾಡಳಿತ ಈ ನಿರ್ಧಾರವನ್ನು ಕೈಬಿಟ್ಟಿರುವುದು ಅಧಿಕಾರವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.
ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಅಳವಡಿಸಲಾಗುತ್ತಿರುವ ಎಲ್ಇಡಿ ಪರದೆ ಉದ್ಘಾಟನಾ ದಿನಾಂಕ ಇನ್ನೂ ಅಂತಿಮಗೊಳಿಸಿಲ್ಲ. ಎಲೆಕ್ಟ್ರಾನಿಕ್ ವ್ಯವಸ್ಥೆಯ ಕಾಮಗಾರಿ ಪೂರ್ಣಗೊಂಡ ಬಳಿಕ ಲೋಕಾರ್ಪಣೆ ದಿನ ನಿಗದಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರನ್ನು ಬದಲಿಸುವುದಿಲ್ಲ.ಈ ವಿಚಾರದಲ್ಲಿ ಭಕ್ತರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಇಂತಹ ಆಧುನಿಕ ತಂತ್ರಜ್ಞಾನವನ್ನು ನಮ್ಮ ಯುವಜನರಿಗೆ ಪರಿಚಯಿಸುವ ಉದ್ದೇಶ ನಮ್ಮದಾಗಿದೆ.
ಡಾ.ಜಿ.ಪರಮೇಶ್ವರ
ಡಿಸಿಎಂ