ಸರ್ಕಾರಿ ನೌಕರರ ಮುಷ್ಕರಕ್ಕೆ ಜನರು ತತ್ತರ

tq office (3)
Published on

ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಸಂಫೂರ್ಣ ಬೆಂಬಲ ವ್ಯಕ್ತವಾಯಿತು.

ಬುಧವಾರ ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿಯೂ ಅಧಿಕಾರಿಗಳು, ಸಿಬ್ಬಂದಿ ಗೈರಾಗಿದ್ದರಿಂದ ಸಾರ್ವಜನಿಕರು ಸೇವೆ ಸಿಗದೆ ಪರದಾಡಿದರು.

ಬೇಡಿಕೆಗಳನ್ನು ಸರ್ಕಾರ ಈಡೇರಿದ ನಂತರ ಮಧ್ಯಾಹ್ನ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳ ಕೆಲವು ಸಿಬ್ಬಂದಿ ಎಂದಿನAತೆ ಕರ್ತವ್ಯಕ್ಕೆ ಹಾಜರಾದರು ಆದರೆ, ಬಹುತೇಕ ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಶಾಲೆಗಳ ಬಾಗಿಲು ಕೂಡ ದಿನಪೂರ್ತಿ ತೆರೆಯಲಿಲ್ಲ.

ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿತ್ತು.

ಜಿಲ್ಲಾಸ್ಪತ್ರೆಯಲ್ಲಿ ತುರ್ತು ಸೇವೆಗೆ ಮಾತ್ರ ವೈದ್ಯರು, ಸಿಬ್ಬಂದಿ ಸಿದ್ಧರಿದ್ದರು, ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದರೂ ಹೊರ ರೋಗಗಿಳ ವಿಭಾಗವನ್ನು ತೆರೆಯದೆ ಬಂದ್ ಮಾಡಿದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಗುರುತಿಸಿಕೊಳ್ಳದ ತುಮಕೂರು ವಿವಿಯಲ್ಲಿ ಕರ್ತವ್ಯಕ್ಕೆ ಯಾವುದೇ ಅಡ್ಡಿಯಾಗದೆ ಎಂದಿನAತೆ ತರಗತಿಗಳು ನಡೆದವು. ಪದವಿ ಕಾಲೇಜುಗಳಲ್ಲಿಯೂ ಅತಿಥಿ ಉಪನ್ಯಾಸಕರು ಹಾಜರಾಗಿದ್ದರಿಂದ ಎಂದಿನAತೆ ತರಗತಿಗಳು ನಡೆದವು.

ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಹೊರ ಗುತ್ತಿಗೆ ನೌಕರರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಆರ್ಥಿಕ ವರ್ಷದ ಕೊನೆಯ ತಿಂಗಳಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಆಗಮಿಸಿದ್ದ ಜನರಿಗೆ ಸಿಬ್ಬಂದಿ, ನೌಕರರು ಇಲ್ಲದೆ ತೊಂದರೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net