ತುಮಕೂರು ಜಿಪಂ ಸಿಇಒ ಜಿ.ಪ್ರಭು ವಿರುದ್ಧ ಗ್ರಾಪಂ ಸದಸ್ಯರ ಆಕೋಶ; ಸರ್ವಾಧಿಕಾರಿ ಧೋರಣೆ ಆರೋಪ

18TMK_Gra_Pam_Member_
Published on

ತುಮಕೂರು: ತುಮಕೂರು ಜಿಪಂ ಸಿಇಒ ಜಿ.ಪ್ರಭು ಸರ್ವಾಧಿಕಾರಿ ಧೋರಣೆ ಮೂಲಕ ಗ್ರಾಪಂ ಪರಮಾಧಿಕಾರದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಬೀದಿಗಳಿದು ಹೋರಾಟ ಆರಂಭಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ನೇತೃತ್ವದಲ್ಲಿ ನೂರಾರು ಗ್ರಾಪಂಗಳಿAದ ಆಗಮಿಸಿದ್ದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಾಂಕೇತಿಕವಾಗಿ ಧರಣಿ ನಡೆಸಿ ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಮೂಲಕ ಸಿಇಒ ವಿರುದ್ಧ ಸರ್ಕಾರಕ್ಕೆ ದೂರು ನೀಡಿದರು.

ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ತುಮಕೂರು ಜಿಪಂ ಸಿಇಒ ಜಿ.ಪ್ರಭು ಗ್ರಾಪಂಗಳು ಸ್ಥಳೀಯ ಸ್ವಯಂ ಸರ್ಕಾರಗಳೇ ಅಥವಾ ಅಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಹಾಗೂ ಕೂಡಲೇ ಗ್ರಾಮ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ನಿಲ್ಲಿಸದಿದ್ದರೆ ತಾಲೂಕು ಮಟ್ಟದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಕಳೆದ ಅ.31ರಂದು ಪತ್ರ ನೀಡಿದ್ದರೂ ಇದುವರೆವಿಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಉತ್ತರ ನೀಡದಿರುವ ಸಿಇಒ ನಡೆ ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಧರಣಿ ನಡೆಸುವುದಾಗಿ ಪತ್ರ ನೀಡಿದರೂ ಮಾತುಕತೆ ನಡೆಸುವ ಸೌಜನ್ಯವಿಲ್ಲದ ದರ್ಪದ ಅಧಿಕಾರಿ ವಿರುದ್ಧ ಎಲ್ಲಾ ತಾಪಂ ಕಚೇರಿ ಮುಂಭಾಗ ಧರಣಿ ನಡೆಯಲಿದೆ ಎಂದರು.

ಕೂಸಿನ ಮನೆ ಒಂದು ಅವ್ಶೆಜ್ಞಾನಿಕ ಯೋಜನೆಯಾಗಿದೆ, ಅದನ್ನು ಅನುಷ್ಠಾನವೊಂದೇ ಸಿಇಒ ಕೆಲಸವಾಗಿದೆ.ಹೀಗೆ ಎಲ್ಲಾ ತೀರ್ಮನಗಳನ್ನೂ ಮೇಲಿನ ಹಂತದ ಅಧಿಕಾರಿಗಳು ಮಾಡಿ ಸ್ಥಳೀಯ ಸ್ವಯಂ ಸರ್ಕರಗಳಾದ ಗ್ರಾಪಂಗಳ ಮೇಲೆ ತಮ್ಮ ಅಧಕಾರದ ವ್ಯಾಪ್ತಿ ಮೀರಿ ಹೇರುವುದು, ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ವಿಕೇಂದ್ರೀಕರಣ ವಿರೋಧಿಯಾಗುತ್ತದೆ ಎಂದರು.

ಸಂವಿಧಾನಾತ್ಮಕ ಸ್ಥಳೀಯ ಸ್ವಯಂ ಸರ್ಕಾರಗಳಾದ ಗ್ರಾಪಂ ಆಡಳಿತದಲ್ಲಿ ಪಿಡಿಒಗಳನ್ನು ಅಮಾನತ್ತು ಮಾಡುವ ಬೆದರಿಕೆ ಹಾಕುವ ಮೂಲಕ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಹಿಂದೆಯೇ ಪತ್ರ ಬರೆಯಲಾಗಿತ್ತು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಕಾರ್ಯದರ್ಶಿ ಚಲಪತಿ ಹೇಳಿದರು.

ಧರಣಿಯಲ್ಲಿ ಜಿಲ್ಲಾ ಗ್ರಾಪಂ ಸದಸ್ಯರ ಜಿಲ್ಲಾಧ್ಯಕ್ಷ ವಿಜಯಪ್ರಕಾಶ್ ದೊಡ್ಡೇರಿ, ಮುಳಬಾಗಿಲು ತಾಲೂಕು ಅಧ್ಯಕ್ಷ ಶಂಕರ್, ಜಿಲ್ಲೆಯ ವಿವಿಧ ಗ್ರಾಪಂಗಳ ಸದಸ್ಯರಾದ ಮಂಜುನಾಥ್, ಜಿ.ಎಸ್.ಶ್ರೀನಿವಾಸ್, ಶಂಕರಪ್ಪ, ಸಾವಿತ್ರಮ್ಮ, ನಾರಾಯಣಸ್ವಾಮಿ, ಆಶಾ, ಮಾರುತಿ, ವೆಂಕಟಾಚಲ ಮತ್ತಿತರರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net