ಎತ್ತಿನಹೊಳೆ ಕಾಮಗಾರಿಗೆ ಆಕ್ಷೇಪ: ಹೆಚ್ಚಿನ ಪ್ರಮಾಣದ ಸಿಡಿಮದ್ದು ಸ್ಫೋಟದಿಂದ ಮನೆಗಳು ಬಿರುಕು

1
ಎತ್ತನ ಹೊಳೆ ಕಾಮಗಾರಿ ಸ್ಥಗಿತ ಮಾಡುವಂತೆ ಒತ್ತಾಯಿಸಿ ಬೇಡರ ಅಗ್ರಹಾರ ಗ್ರಾಮಸ್ಥರು ಭಾನುವಾರ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ಮಾಡಿದರು.
Published on

ಕೊರಟಗೆರೆ: ಎತ್ತಿನಹೊಳೆ ಕಾಮಗಾರಿಗೆ ಸಿಡಿಮದ್ದು ಬಳಸುವುದರಿಂದ ಮನೆಗಳು ಬಿರುಕು ಬಿಡುತ್ತಿದ್ದು, ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಕೋಳಾಲ ಹೋಬಳಿ ಬೇಡರ ಅಗ್ರಹಾರ ಗ್ರಾಮಸ್ಥರು ಕಾಮಗಾರಿ ಸ್ಥಳದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.


ನಾಲಾ ಕಾಮಗಾರಿಗಳಿಗೆ ಹೆಚ್ಚಿನ ಪ್ರಮಾಣದ ಸಿಡಿಮದ್ದು ಬಳಸುವುದರಿಂದ ಮನೆಗಳು ಬಿರುಕುಬಿಟ್ಟಿವೆ. ಶೀಟಿನ ಮನೆಗಳು ಒಡೆದು ತೊಂದರೆಯಾಗುತ್ತಿದೆ. ಗುತ್ತಿಗಾರ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಡಿಮದ್ದು ಬಳಕೆ ಮಾಡುತ್ತಿದ್ದು, ಬದುಕು ದುಸ್ಥರವಾಗಿದೆ. ಸಂಭಂದಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಎತ್ತಿನ ಹೊಳೆ ಕಾಮಗಾರಿಯ ಇಂಜಿನಿಯರ್​ಗಳು ಭೇಟಿ ನೀಡಿ ರಣೆ ಕೊಡಬೇಕು ಎಂದು ಒತ್ತಾಯಿಸಿದರು.


ನಮಗೆ ಯಾವುದೇ ಪರಿಹಾರ ನೀಡದೆ ಕಾಮಗಾರಿ ನಡೆಸುತ್ತಿದ್ದಾರೆ. ಊರಿನ ರುದ್ರಭೂಮಿ ಒತ್ತುವರಿ ಮಾಡಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮಸ್ಥರಾದ ಧನಂಜಯ, ಶ್ರೀನಾಥ್​, ಧನುಷ್​, ಗೋವಿಂದರಾಜು, ಉಮೇಶ್​, ಗಂಗಮ್ಮ, ರಂಗಮ್ಮ, ನಾಗವೇಣಿ, ಕಾವಲಮ್ಮ, ನಾಗವೇಣಿ, ಮಂಜುನಾಥ್​ ಇದ್ದರು.

ಗೋವಿಂದರಾಜು ಸ್ಥಳಿಯ ರೈತ, ಬೇಡರ ಅಗ್ರಹಾರ

ಸರ್ಕಾರದ ಹಂತದಲ್ಲಿ ಸ್ಥಳಿಯ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸುತ್ತೇವೆ ಅಲ್ಲಿಯವರೆಗೆ ಗುತ್ತಿದಾರರು ಕಾಮಗಾರಿ ಮಾಡಬಾರದು. ಹಾಗೇನಾದರೂ ಕಾಮಗಾರಿ ಮಾಡಿದರೆ ಉಗ್ರ ರೀತಿಯಲ್ಲಿ ಪ್ರತಿಭಟನೆ ಮಾಡಲಾಗುದು.

ಶಬ್ಬೀರ್​ ಪಾಷಾ ರೈತ ಸಂ, ಪ್ರಧಾನ ಕಾರ್ಯದರ್ಶಿ, ಕೊರಟಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net