

ಕುಣಿಗಲ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕೈ ಪಾಳಯಕ್ಕೆ ಬಿಗ್ ಶಾಕ್ ನೀಡಿದ್ದು ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬಿಜೆಪಿ ಕಡೆಗೆ ಮಹಾವಲಸೆ ಆರಂಭವಾಗಿದೆ.
ತಾಲೂಕಿನ ವಿವಿಧ ಭಾಗದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ 500ಕ್ಕೂ ಹೆಚ್ಚು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿರುವುದು ತಾಲೂಕಿನ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನೆಡೆ ಎನ್ನಿಸಿದೆ.
ಅಂಚೇಪಾಳ್ಯ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯೆ ಪದ್ಮಾ, ಕೆಂಪೀರೇಗೌಡ, ತಾಪಂ ಮಾಜಿ ಅಧ್ಯಕ್ಷ ಕೆಂಪೇಗೌಡ ಸೇರಿದಂತೆ ತಾಲೂಕಿನ ಪ್ರಮುಖ ಮುಖಂಡರು ಪಕ್ಷ ತೊರೆದಿರುವುದು ಶಾಸಕ ಡಾ.ಎಚ್.ಡಿ.ರಂಗನಾಥ್‌ಗೆ ದೊಡ್ಡ ಹಿನ್ನೆಡೆಯಾಗಿದೆ.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕುಣಿಗಲ್‌ನಲ್ಲಿ ಕಾಂಗ್ರೆಸ್‌ನಲ್ಲಿ ಖಾಲಿಯಾಗಲು ಡಿಕೆ ಸಹೋದರರೇ ಕಾರಣ ಎಂದು ಹರಿಹಾಯ್ದರು.
ನಾನು ನ್ಯಾಯಾಧೀಶ ಹುದ್ದೆ ತೊರೆದು ರಾಜಕಾರಣ ಆರಂಭಿಸಿದಾಗ ಎದುರಿದ್ದು ಹಿರಿಯ ಮುಖಂಡ ಜನತಾದಳದ ವೈ.ಕೆ.ರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ಕಟ್ಟಲು ನಾನು ಸೇರಿದಂತೆ ಸಾವಿರಾರು ಕಾರ್ಯಕರ್ತರ ಬೆವರು ಇದೆ,
ನನ್ನ ರಾಜಕೀಯದ ಮೊದಲ ಚುನಾವಣೆಯಲ್ಲಿಯೇ ನನಗೆ ಬಿ.ಫಾರಂ ಕೊಟ್ಟರು, ಕೆ.ಲಕ್ಕಪ್ಪ ಅವರಿಗೆ ಸಿ.ಫಾರಂ ಕೊಟ್ಟರು. ನಂತರ 10 ವರ್ಷ ಶಾಸಕನಾಗಿದ್ದ ನನಗೆ 2008ರಲ್ಲಿ ಕುಣಿಗಲ್ ಹಾಗೂ ತುಮಕೂರು ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ಕೇಳಿದರೂ ಎರಡೂ ಕಡೆಯೂ ಕೊಡಲಿಲ್ಲ…
ಜೆಡಿಎಸ್ ಸೇರ್ಪಡೆಯಾದಾಗ 2009ರಲ್ಲಿ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ, 2013ರಲ್ಲಿ ನನಗೆ ಬಿ.ಫಾರಂ ನೀಡಿದ್ದ ನಂತರ ಬೇರೊಬ್ಬರಿಗೆ ಸಿ.ಫಾರಂ ಕೊಟ್ಟು ನನಗೆ ಅಲ್ಲೂ ವಂಚಿಸಲಾಯಿತು. 2014ರಲ್ಲಿ ಕಾಂಗ್ರೆಸ್ ಮುಖಂಡರು ಸಹಕಾರದಿಂದ ಸಂಸತ್ ಸದಸ್ಯನಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದರೂ ಕುತಂತ್ರ ಮಾಡಿದರು ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನAದೀಶ್, ಮಾಜಿ ಶಾಸಕ ಬಿ.ಸುರೇಶ್‌ಗೌಡ, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಎಚ್.ಡಿ.ರಾಜೇಶ್‌ಗೌಡ, ಬಲರಾಮ್ ಮತ್ತಿತರರು ಇದ್ದರು.