ಟೀ ಮಾರುವ ಅನ್ನಪೂರ್ಣಮ್ಮ ಊರ್ಡಿಗೆರೆ ಗ್ರಾಪಂ ಅಧ್ಯಕ್ಷೆ

19_TEA
Published on

ತುಮಕೂರು: ದೇವರಾಯನದುರ್ಗ ದೇವಾಲಯದ ಆವರಣದಲ್ಲಿ ಟೀ ಅಂಗಡಿ ನಡೆಸುತ್ತಿರುವ ಕೆ.ಎಸ್.ಅನ್ನಪೂರ್ಣಮ್ಮ ತಾಲೂಕಿನ ಊರ್ಡಿಗೆರೆ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದರು.

ಬುಧವಾರ ನಡೆದ ಅಧ್ಯಕ್ಷೆ, ಉಪಾಧ್ಯಕ್ಷೆ ಸ್ಥಾನದ ಚುನಾವಣೆಯಲ್ಲಿ ಅನ್ನಪೂರ್ಣಮ್ಮ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.

ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದೇವರಾಯನದುರ್ಗ ಕ್ಷೇತ್ರದಿಂದ ಸದಸ್ಯೆಯಾಗಿ ಆಯ್ಕೆಯಾಗಿರುವ ಕೆ.ಎಸ್.ಅನ್ನಪೂರ್ಣಮ್ಮ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು.

ಬಿಸಿಎಂ(ಬಿ) ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೊಡಿಗೆಹಳ್ಳಿ ಕ್ಷೇತ್ರದ ಸುಗುಣಮ್ಮ ಮಾತ್ರ ಅರ್ಜಿ ಸಲ್ಲಿಸಿದ್ದರು.ಹಾಗಾಗಿ, ಅವಿರೋಧವಾಗಿ ಆಯ್ಕೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net