

ತುಮಕೂರು: ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳಿದೇವಾಲಯದಿಂದ ಆಲಪ್ಪನಗುಡ್ಡೆ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ರೇಷ್ಮೆ ಫಾರಂ ಕಾಂಪೌಂಡ್ ಬಳಿ ಮೇ.8ರಂದು ಸುಮಾರು 65 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತನು 5.6 ಅಡಿ ಎತ್ತರವಿದ್ದು, ಮೃತ ದೇಹವು ಕೊಳೆತು ಹುಳು ಬಿದ್ದಿರುತ್ತದೆ. ಮೃತನ ಮೈಮೇಲೆ ಬಿಳಿ ಬಣ್ಣದ ಹೂವಿನ ಚಿತ್ರವಿರುವ ಮಾಸಲಾದ ರೆಡಿಮೇಡ್ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟು ಇರುತ್ತದೆ.
ವಾರಸುದಾರರು ಯಾರಾದರೂ ಇದ್ದಲ್ಲಿ ದೂ.08132 -220229, 0816 -2272451 ಸಂಪರ್ಕಿಸಿ.