ಮೌಲ್ಯಮಾಪನ ಮುಗಿದ 24 ತಾಸಿನಲ್ಲಿ ಫಲಿತಾಂಶ ಪ್ರಕಟಿಸಿದ ತುಮಕೂರು ವಿವಿ

Tumkur-University-2021 1
Published on

ತುಮಕೂರು: ತುಮಕೂರು ವಿಶ್ವವಿದ್ಯಾಲಯ ಮೌಲ್ಯಮಾಪನ ಮುಗಿದ 24 ಗಂಟೆಗಳಲ್ಲಿ ಬಿಸಿಎ 6ನೇ ಸೆಮಿಸ್ಟರ್‌ನ್ನ ಫಲಿತಾಂಶ ಪ್ರಕಟಿಸುವ ಮೂಲಕ ದಾಖಲೆ ಬರೆದಿದೆ.

ಇತರೆ ಪದವಿಯ ಎಲ್ಲಾ ವಿಷಯಗಳ ಮೌಲ್ಯಮಾಪನ ಕೂಡ ಭರದಿಂದ ಸಾಗುತ್ತಿದ್ದು, ಸದ್ಯದಲ್ಲೇ ಅಂತಿಮ ವರ್ಷ ಪದವಿಯ ಎಲ್ಲಾ ವಿಷಯಗಳ ಫಲಿತಾಂಶ ಪ್ರಕಟಿಸಲಾಗುವುದು ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಸಿಎ 6ನೇ ಸೆಮಿಸ್ಟರ್ ಪರೀಕ್ಷೆ ಮೌಲ್ಯಮಾಪನ ಸೆ.25ರಂದು ಪೂರ್ಣಗೊಂಡಿತ್ತು, ಸೆ.26ರಂದು ವಿವಿ ಫಲಿತಾಂಶ ಪ್ರಕಟಿಸಿದ್ದು ವಿದ್ಯಾರ್ಥಿಗಳು ತುಮಕೂರು ವಿವಿ ವೆಬ್‌ಸೈಟ್ www.tumkuruniversity.ac.inನಲ್ಲಿ ಫಲಿತಾಂಶ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net