

ತುಮಕೂರು: 79ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ತಿರಂಗ ಯಾತ್ರಾ ಸಮಿತಿ ವತಿಯಿಂದ ತ್ರಿವರ್ಣ ಧ್ವಜಗಳ ಪ್ರದರ್ಶನದೊಂದಿಗೆ ಭಾರತಾಂಭೆ ಭಾವಚಿತ್ರದ ವೈಭವದ ಮೆರವಣಿಗೆ ತಿರಂಗಾ ಯಾತ್ರೆ ಶುಕ್ರವಾರ ನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಮಹಾಲಕ್ಷಿ$್ಮ ಪೀಠದ ಜ್ಞಾನಾನಂದ ಸ್ವಾಮೀಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರಾಜ್ಯ ಕಾರ್ಯದರ್ಶಿ ಅಂಬಿಕಾ, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮತ್ತಿತರರು ಇದರು.
ನಗರಪಾಲಿಕೆ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತಿರಂಗಾ ಯಾತ್ರೆ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ದೇಶದ ಅಖಂಡತೆ, ಸಾರ್ವಭೌಮತೆ, ಅಸ್ಮಿತೆಯನ್ನು ಮೇಳೈಸುವ ದೇಶದ ಸ್ವಾತಂತ್ರ್ಯವನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆಚರಿಸಲು, ವಿದ್ಯಾರ್ಥಿ, ಯುವಜನರಲ್ಲಿ ದೇಶಾಭಿಮಾನ ಮೂಡಿಸಲು ಈ ಯಾತ್ರೆ ಪ್ರೇರಣೆಯಾಗಿದೆ ಎಂದರು.
ಶಾಂತಿ, ಸಹಬಾಳ್ವೆ, ಐಕ್ಯತೆಗೆ ಹೆಸರಾದ ತುಮಕೂರು ನಗರದಲ್ಲಿ ಈ ಬಾರಿಯೂ ಎಲ್ಲಾ ಸಮಾಜದವರೂ ಒಟ್ಟುಗೂಡಿ ಸಂಭ್ರಮದಿಂದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ದೇಶದ ರಕ್ಷಣೆ, ಸಮಗ್ರತೆ, ಪ್ರಗತಿಗೆ ಎಲ್ಲರೂ ಸಂಕಲ್ಪ ಮಾಡೋಣ ಎಂದರು.
ನಗರದ ನಾನಾ ಸಂಘಸಂಸ್ಥೆಗಳ ಮುಖಂಡರು, ನಿವೃತ್ತ ಸೈನಿಕರು, ಎನ್ಸಿಸಿ, ಸ್ಕೌಟ್ಸ್-ಗೈಡ್ಸ್ ಕೆಡೆಟ್ಗಳು, ಕಾಲೇಜು ವಿದ್ಯಾರ್ಥಿಗಳು, ಕೈಗಾರಿಕೋದ್ಯಮಿಗಳು, ವಕೀಲರು, ವೈದ್ಯರು, ವರ್ತಕರು, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್ಗಳ ಮುಖಂಡರು ತ್ರಿವರ್ಣ ಧ್ವಜ ಪ್ರದರ್ಶಿಸುತ್ತಾ ಸಾಗಿದರು. ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಯಾತ್ರೆಯ ಸಂಭ್ರಮ ಹೆಚ್ಚಿಸಿತು. ಬಿಜಿಎಸ್ ವೃತ್ತದಿಂದ ಆರಂಭಗೊಂಡು ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ಗುಂಚಿ ವೃತ್ತದ ಮೂಲಕ ಸಾಗಿ ಸ್ವಾತಂತ್ರ್ಯ ಚೌಕದಲ್ಲಿ ತಿರಂಗಾ ಯಾತ್ರೆ ಸಮಾರೋಪಗೊಂಡಿತು.
ಯಾತ್ರಾ ಸಮಿತಿ ಸಂಚಾಲಕ ಜಿ.ಆರ್.ಸುರೇಶ್, ಬಿಜೆಪಿ ಮುಖಂಡರಾದ, ಎಸ್.ಶಿವಪ್ರಸಾದ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ನಗರ ಅಧ್ಯಕ್ಷ ಕೆ.ಧನುಷ್, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಎಪಿಎಂಸಿ ವ್ಯಾಪಾರಿಗಳ ಸಮುದಾಯದ ಆರ್.ಎ.ಸುರೇಶ್ಕುಮಾರ್, ಹಿರಿಯ ವೈದ್ಯಾಧಿಕಾರಿ ಡಾ.ಕೆ.ಪಿ.ಸುರೇಶ್ಬಾಬು, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಬಿಜೆಪಿ ಮುಖಂಡರಾದ ಸಂದೀಪ್ಗೌಡ, ಟಿ.ಹೆಚ್.ಹನುಮಂತರಾಜು, ಹೆಚ್.ಎಂ.ರವೀಶಯ್ಯ, ಬಾವಿಕಟ್ಟೆ ನಾಗಣ್ಣ, ಸತ್ಯಮಂಗಲ ಜಗದೀಶ್, ರುದ್ರೇಶ್, ಗಣೇಶ್ಪ್ರಸಾದ್, ಅಕ್ಷಯ್ ಚೌಧರಿ, ಎಚ್.ಜಿ.ಸದಾಶಿವಯ್ಯ, ಸುರೇಶ್ ರಾವ್, ಕೇಶವಮೂರ್ತಿ ಇದ್ದರು.
15ಟಿಎಂಕೆ ತಿರಂಗಯಾತ್ರೆ
*ತುಮಕೂರಿನಲ್ಲಿ 79ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ತಿರಂಗ ಯಾತ್ರಾ ಸಮಿತಿ ವತಿಯಿಂದ ತ್ರಿವರ್ಣ ಧ್ವಜಗಳ ಪ್ರದರ್ಶನದೊಂದಿಗೆ ಭಾರತಾಂಭೆ ಭಾವಚಿತ್ರದ ವೈಭವದ ಮೆರವಣಿಗೆ "ತಿರಂಗಾ ಯಾತ್ರೆ' ಶುಕ್ರವಾರ ನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು.