

ತುಮಕೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆಯುಂಟಾಗಿ ಡಿಯುಡಿಸಿ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು ಮೂರು ಜನರು ಲಿಫ್ಟ್ ನಲ್ಲಿ
ಸಿಲುಕಿ ಪರದಾಡಿರುವ ಘಟನೆ ನಡೆದಿದೆ.
ಮಂಗಳವಾರ ಮಧ್ಯಾಹ್ನ 30.30ರಲ್ಲಿ ವಿದ್ಯುತ್ ಕಟ್ ಮಾಡಲಾಗಿದ್ದು ನಾಲ್ಕು ಗಂಟೆಯಾದರೂ ವಿದ್ಯುತ್ ಬರದ ಹಿನ್ನೆಲೆಯಲ್ಲಿ ಲಿಫ್ಟ್ನಲ್ಲಿ ಸಿಲುಕಿ ಪರದಾಡುವಂತಾಗಿತ್ತು.
ಬೆಸ್ಕಾಂ ಸಿಬ್ಬಂದಿ ಕೂಡ ಊಟಕ್ಕೆ ತೆರಳಿದ್ದರಿಂದ ಸಕಾಲದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗಲಿಲ್ಲ, ಜಿಲ್ಲಾಧಿಕಾರಿ ಕಚೇರಿ ಲಿಫ್ಟ್ನಲ್ಲಿ ಸಿಲುಕಿ ಪರದಾಡುವುದು ಸಾಮಾನ್ಯ ಎನ್ನಿಸಿದ್ದು ಅದರಲ್ಲಿ ಸಿಲುಕಿದ್ದ ಸಿಬ್ಬಂದಿ ಮೊಬೈಲ್ನಲ್ಲಿ ಗೇಮ್ ಆಡಿಕೊಂಡು ಕಾಲ ಕಳೆದರು. ಲಿಫ್ಟ್ನಲ್ಲಿ ಸಿಬ್ಬಂದಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಿಲುಕಿದ್ದರೂ ಸಾರ್ವಜನಿಕರಿಗೆ ವಿಷಯ ತಿಳಿಯದಂತೆ ಜಿಲ್ಲಾಧಿಕಾರಿ ಸಿಬ್ಬಂದಿ ಸರ್ಕಸ್ ನಡೆಸಿದ್ದರು.