

ತುಮಕೂರು: ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಹಾಲಿಗೆ ಹೆಚ್ಚಿಸಿರುವ 3ರೂ.ಗಳನ್ನು ನೇರವಾಗಿ ರೈತರಿಗೆ ವರ್ಗಾಹಿಸುವ ಮಹತ್ವದ ತೀರ್ಮಾನವನ್ನು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಆಡಳಿತ ಮಂಡಳಿ ತೆಗೆದುಕೊಂಡಿದೆ.
ಆ.1ರAದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ವಿಷಯದ ಬಗ್ಗೆ ಚರ್ಚಿಸಿ ಯಥಾವತ್ತಾಗಿ 3ರೂ. ದರವನ್ನು ಹಾಲು ಉತ್ಪದಕರುಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಈ ನಿರ್ಣತ ಆ.1ರಿಂದಲೇ ಜಿಲ್ಲೆಯ ಎಲ್ಲಾ 1338 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಜಾರಿಯಾಗಲಿದೆ.
ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ ರೂ. 36.71ರೂ. ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀಟರ್ ಹಾಲಿನ ಪರಿಷ್ಕೃತ ಮೂಲ ಬೆಲೆ 35.78ರೂ. ನೀಡಲಾಗುತ್ತಿದೆ.