ಪ್ರಯಾಣಿಕರ ತಂಗುದಾಣವೆ ಅನಾಥ ಮಹಿಳೆ ಮನೆ; ತಿರುಗಿಯೂ ನೋಡದ ಅಧಿಕಾರಿಗಳು

1741954078054
Published on

ಗುಬ್ಬಿ: ರಾಷ್ಟ್ರೀಯ ಹೆದ್ದಾರಿ 206ರ ಬಸ್​ ಶೆಲ್ಟರ್​ನ್ನೇ ಗೂಡು ಮಾಡಿಕೊಂಡು ಬದಕು ನಡೆಸುತ್ತಿರುವ ಮಹಿಳೆಯ ಅಯೋಮಯ ಸ್ಥಿತಿ ಈವರೆಗೂ ಯಾರೋಬ್ಬರಿಗೂ ಕಾಣಿಸಿಲ್ಲ. ಗುಬ್ಬಿ&ನಿಟ್ಟೂರು ನಡುವಿನ ಗದ್ದೆ ಬಯಲು ಪ್ರಯಾಣಿಕರ ತಂಗುದಾಣವನ್ನೇ ಆಶ್ರಯ ತಾಣವಾಗಿಸಿಕೊಂಡಿರುವ ಈ ಅನಾಥೆ ವೃದ್ಧೆಗೆ ಹೆಸರೂ ಇಲ್ಲ, ವಿಳಾಸವೂ ಇಲ್ಲ.

ಕಳೆದ ಆರು ತಿಂಗಳಿನಿಂದಲೂ ಇದೇ ತಂಗು ದಾಣದಲ್ಲಿ ವಾಸಿರುವ ಮಹಿಳೆ ಸಮೀಪದ ಚೇಳೂರಿನವರು ಎನ್ನಲಾಗಿದ್ದು ಮಗ ಡೆವರ್​ ಕೆಲಸ ಮಾಡುತ್ತಾನೆ ಮಗಳು ಗೋವಾದಲ್ಲಿದ್ದಾಳೆ ಎಂದು ಹೇಳುತ್ತಾರೆ ಆದರೆ, ಯಾರೊಬ್ಬ ಸಂಬಂಧಿಕರೂ ಇವರನ್ನು ನೋಡಲು ಬಂದಿಲ್ಲ. ಕರೆದುಕೊಂಡು ಹೋಗಿ ಆಶ್ರಯವನ್ನು ನೀಡಿಲ್ಲ.

ಬಸ್​ ತಂಗುದಾಣ ಮನೆಯಾಗಿ ಮಾಡಿಕೊಂಡಿದ್ದು ನೀರಿನ ಖಾಲಿ ಬಾಟಲ್​ಗಳು, ಹರಿದ ಚಾಪೆ, ಒಲೆ ಉರಿಸಲು ಮರದಸೌದೆ, ಹಳೆಯ ಬಟ್ಟೆ ಗಳನ್ನು ತುಂಬಿಕೊಂಡು ತಂಗುದಾಣವನ್ನೇ ಮನೆಯ ರೀತಿ ಪರಿವರ್ತಿಸಿಕೊಂಡಿದ್ದಾರೆ. ಇದೇ ಮಾರ್ಗದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತಿನಿತ್ಯ ಓಡಾಡುತ್ತಾರೆಯಾದರೂ ಈಕೆಯ ಬಗ್ಗೆ ಯಾರೊಬ್ಬರು ತೆಲೆ ಕೆಡೆಸಿಕೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net