ಕುಣಿಗಲ್ ಪೊಲೀಸರ ಮಿಂಚಿನ ದಾಳಿ; 269 ಸಿಲಿಂಡರ್, ಬೋಲೇರೋ ವಶ

1 kunigal 1
Published on

ತುಮಕೂರು: ಕುಣಿಗಲ್ ತಾಲೂಕಿನ ತೋಟದ ಮನೆಯಲ್ಲಿ ಆಟೋ ರಿಕ್ಷಾ ಕಿಟ್‌ಗಳಿಗೆ ಗ್ಯಾಸ್ ರೀಫಿಲಿಂಗ್ ಮಾಡಲು ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೊಡೌನ್ ಮೇಲೆ ಮಿಂಚಿನ ದಾಳಿ ನೆಡೆಸಿದ ಕುಣಿಗಲ್ ಪೊಲೀಸರು ವಿವಿಧ ಇಂಧನ ಕಂಪನಿಗೆ ಸೇರಿದ 269 ಸಿಲಿಂಡರ್, ರೀಫಿಲಿಂಗ್ ಸಾಮಾಗ್ರಿ, ಬೋಲೇರೋ ವಾಹನ ವಶಕ್ಕೆ ಪಡೆದಿದ್ದಾರೆ.

ಬೋರಲಿಂಗನಪಾಳ್ಯದ ಕುಮಾರ ಎಂಬಾತ ಗ್ರಾಮದ ನೇರಳೆ ಮಾರಮ್ಮನ ದೇವಸ್ಥಾನದ ಹಿಂಭಾಗದ ಲೇಔಟ್ ಬಳಿಯ ತೆಂಗಿನ ತೋಟದ ಶೆಡ್‌ನಲ್ಲಿ ಆಕ್ರಮವಾಗಿ ಸಿಲಿಂಡರ್ ಶೇಖರಣೆ ಮಾಡಿಟ್ಟಿದ್ದನು.

ವೃತ್ತ ನಿರೀಕ್ಷಕ ವಿ.ಎಂ.ಗುರುಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಸೋಮವಾರ ರಾತ್ರಿ ದಾಳಿ ನಡೆಸಲು ಮುಂದಾದಾಗ ಆರೋಪಿ ಕುಮಾರ, ಶೆಡ್‌ಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.

ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net