

ತುಮಕೂರು: ನೈಸರ್ಗಿಕ ಉಂಡೆ ಕೊಬ್ಬರಿ ಬೆಲೆ ತೀವ್ರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಸಂಘಟಿತ ಹೋರಾಟ ರೂಪಿಸಲು ನಗರದ ಕನ್ನಡ ಭವನದಲ್ಲಿ ಆ.1ರಂದು ಬೆಳಗ್ಗೆ 11ಕ್ಕೆ ತೆಂಗು ಬೆಳೆಗಾರರ ರಾಜ್ಯ ಮಟ್ಟದ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ.
ತಿಪಟೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ದುಂಡುಮೇಜಿನ ಸಭೆಯ ತೀರ್ಮಾನದಂತೆ ಈ ಸಮಾಲೋಚನಸಭೆ ನಡೆಯುತ್ತಿದೆ. ರಾಜ್ಯದ ಎಲ್ಲಾ ರೈತ ಸಂಘಟನೆಗಳ ಮುಖಂಡರು ಭಾಗವಹಿಸಬೇಕು ಎಂದು ಸಂಯುಕ್ತ ಹೋರಾಟ - ಕರ್ನಾಟಕ, ತುಮಕೂರು ಜಿಲ್ಲಾ ಘಟಕದ ಪರವಾಗಿ ಸಂಚಾಲಕ ಸಿ.ಯತಿರಾಜು, ಮುಖಂಡರಾದ ಎ.ಗೋವಿಂದರಾಜು, ಬಿ.ಉಮೇಶ್, ಎಸ್.ಎನ್.ಸ್ವಾಮಿ, ರವೀಶ್, ಪಂಡಿತ್ ಜವಾಹರ್ ಮನವಿ ಮಾಡಿದ್ದಾರೆ.