ಬೆಳ್ಳಿರಥದಲಿ ಮೆರವಣಿಗೆ ಮಾಡಿ ನಿವೃತ್ತ ಶಿಕ್ಷಕನಿಗೆ ಬೀಳ್ಕೊಟ್ಟ ವಿದ್ಯಾರ್ಥಿಗಳು

01_Belli_Ratha
Published on

ತುಮಕೂರು: ಸರ್ಕಾರಿ ಶಾಲೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ವೃತ್ತಿ ಶಿಕ್ಷಕ ಟಿ.ನರಸಿಂಹಮೂರ್ತಿ ಅವರನ್ನು ಬೆಳ್ಳಿರಥದಲ್ಲಿ ಕೂರಿಸಿ ಊರಿನ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಗೌರವಿಸಿ, ಬೀಳ್ಕೊಡಲಾಯಿತು.

ಹೆಬ್ಬೂರು ಹೋಬಳಿ ಸಿರಿವರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಟಿ.ನರಸಿಂಹಮೂರ್ತಿ ಜು.31ರಂದು ನಿವೃತ್ತರಾಗಿದ್ದು ಭಾನುವಾರ ಗ್ರಾಮದ ವಿದ್ಯಾರ್ಥಿಗಳೆಲ್ಲಾ ಸೇರಿ ಅದ್ಧೂರಿಯಾಗಿ ಸನ್ಮಾನಿಸಿದರು.

ಜನಪದ ಕಲಾತಂಡಗಳಾದ ವೀರಗಾಸೆ, ಡೊಳ್ಳು ಕುಣಿತ, ಗೊಂಬೆ ಕುಣಿತ, ತಮಟೆ ವಾದ್ಯಗಳು ಮತ್ತು ಪೂರ್ಣಕುಂಭ ಕಳಸಗಳೊಂದಿಗೆ ನಡೆದ ಬೆಳ್ಳಿರಥದ ಮೆರವಣಿಗೆ ನೂರಾರು ಜನರು ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಜಿ.ಟಿ.ಚೇತನ, ಗ್ರಾಪಂ ಅಧ್ಯಕ್ಷ ಜಯಮ್ಮ, ಕಾರ್ಯದರ್ಶಿ ಲಿಂಗರಾಜು, ಹಿರಿಯ ವಿದ್ಯಾರ್ಥಿ ಸಂಘದ ಶಿವಮೂರ್ತಿ, ಶಿಕ್ಷಕರಾದ ಸಿ.ಕೆ.ಉಮೇಶ್, ತುಕರಾಮ್, ಸ್ಥಳೀಯರಾದ ಎಸ್.ಎಲ್.ನಾರಯಣಸ್ವಾಮಿ, ಜಿ.ವಿ.ನಾರಾಯಣಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net