

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಚಿಕ್ಕನಹಳ್ಳಿ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಿರುವಂತೆ ನಿರ್ಮಿಸಿರುವ ಪುಷ್ಪ ಹರಾಜು ಕೇಂದ್ರದಲ್ಲಿ ವಾಣಿಜ್ಯ ಮಳಿಗೆ ಕೇಳೊರಿಲ್ಲದಂತಾಗಿವೆ.
ಖಾಲಿ ಇರುವ 5 ವಾಣಿಜ್ಯ ಮಳಿಗೆಗಳನ್ನು ಮಾಸಿಕ ಬಾಡಿಗೆ ಆಧಾರದ ಮೇರೆಗೆ ಬಾಡಿಗೆ ನೀಡಲು ಅರ್ಹ ವ್ಯಾಪಾರಸ್ಥರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಅ.13ರ ವರೆಗೆ ವಿಸ್ತರಿಸಲಾಗಿದೆ.
ಮಾಸಿಕ 1000 ರೂ. ಬಾಡಿಗೆ ನಿಗಧಿಪಡಿಸಲಾಗಿದ್ದು, ಮಳಿಗೆಗಳ ಸಂಖ್ಯೆ 6, 11, 12, 14, 15 ಖಾಲಿ ಇರುತ್ತವೆ. ವ್ಯಾಪಾರಸ್ಥರಿಗೆ ಲಾಟರಿ, ಜೇಷ್ಠತೆ ಮುಖಾಂತರ ಹಂಚಿಕೆ ಮಾಡಲಾಗುವುದು. ಪುಷ್ಪ ಹರಾಜು ಕೇಂದ್ರದಲ್ಲಿ ಹೂವಿನ ವಹಿವಾಟು ನಡೆಸಲು ಎಲ್ಲಾ ಸೌಲಭ್ಯಗಳು ಲಭ್ಯವಿದೆ ಎಂದು ತೋಟಗಾರಿಕೆ ಇಲಾಖೆ ಪದೇಪದೇ ಪ್ರಕಟಣೆ ನೀಡುತ್ತಿದೆ.
ಆಸಕ್ತರು ಸಹಾಯಕ ತೋಟಗಾರಿಕೆ ನಿರ್ದೇಶಕ, ಪುಷ್ಪ ಹರಾಜು ಕೇಂದ್ರ, ಚಿಕ್ಕನಹಳ್ಳಿ. ಮೊ.9481554308 ಸಂಪರ್ಕಿಸಿ ಮಾಹಿತಿ ಪಡೆಯಬಹುದು.