

ಹುಳಿಯಾರು: ತೋಟದ ಮನೆಯಲ್ಲಿದ್ದ ಕುರಿ ಶೆಡ್ ಗೆ 80 ಕುರಿ, ಆರು ಹಸು ಹಾಗೂ ಕೋಳಿಗಳು ಸಜೀವವಾಗಿ ದಹನವಾಗಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಸಮೀಪದ ರಾಮಘಟ್ಟದಲ್ಲಿ ಸೋಮವಾರ ರಾತ್ರಿ ಜರುಗಿದೆ.
ಚೇತನ ಕುಮಾರ್ ಎಂಬುವವರಿಗೆ ಸೇರಿದ ಶೆಡ್ ಗೆ ಬೆಂಕಿ ತಗುಲಿದೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದವರು ದೌಡಾಯಿಸಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.