ರಾಹುಲ್‌ಗಾಂಧಿಗೆ ಸೌತೇಕಾಯಿ ಕೊಟ್ಟು ಆಶಿರ್ವದಿಸಿದ್ದ ಶಾರದಮ್ಮ ಇನ್ನಿಲ್ಲ; ಭಾರತ್‌ಜೋಡೋ ಯಾತ್ರೆಯಲ್ಲಿ ಗಮನ ಸೆಳೆದಿದ್ದ ವೃದ್ಧೆ

RG
Published on

ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಸೌತೇಕಾಯಿ ಕೊಟ್ಟು `ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು' ಎಂದು ಆಶಿರ್ವದಿಸಿ ಗಮನ ಸೆಳೆದಿದ್ದ ಶಾರದಮ್ಮ(7) ನಿಧನರಾದರು.

ಚಿಕ್ಕನಾಯಕನಹಳ್ಳಿ ಸಮೀಪದ ಜೋಗಿಹಳ್ಳಿಯ ಶಾರದಮ್ಮ ವಯೋಸಹಜ ಅನಾರೋಗ್ಯದಿಂದ ಕೆಲವು ದಿನಗಳಿಂದ ಬಳಲುತ್ತಿದ್ದರು.

ಚಿಕ್ಕನಾಯಕನಹಳ್ಳಿ ಬಸ್ ನಿಲ್ದಾಣದಲ್ಲಿ ಸೌತೆಕಾಯಿ ಮಾರಾಟ ಮಾಡುತ್ತಿದ್ದ ಶಾರದಮ್ಮ ಅವರನ್ನು ರಾಹುಲ್‌ಗಾಂಧಿ ಗುರುತಿಸಿ ಜತೆಯಲ್ಲಿ ಪೋಟೋ ಕ್ಲಿಕ್ಕಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net