ಮನೆಯ ಬಾಗಿಲು ತೆರೆದ ಬೂವನಹಳ್ಳಿ ನಾಗರಾಜು; ಲೋಕಾಯುಕ್ತ ಪೊಲೀಸರಿಂದ ದಾಖಲೆಗಳ ವಶ

18TMK_LOKA_Bhunalli_NAGRAJ_Home
Published on

ತುಮಕೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಂಡು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದ ಜಿಪಂ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿ ಬೂವನಹಳ್ಳಿ ನಾಗರಾಜು ಶುಕ್ರವಾರ ಅಧಿಕಾರಿಗಳ ಮುಂದೆ ಹಾಜರಾದರು.

ಗುರುವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ನಗರದ ಆದರ್ಶ ನಗರದ ನಿವಾಸದೆದುರು ಕಾದು ಕುಳಿತಿದ್ದ ಲೋಕಾಯುಕ್ತ ಪೊಲೀಸರು ಕೊನೆಗೆ ಮನೆಯ ಬಾಗಿಲಿಗೆ ಸೀಲ್‌ಹಾಕಿ ಸೀಜ್ ಮಾಡಿದ್ದರು.

ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಪೊಲೀಸರ ಸಂಪರ್ಕಕ್ಕೆ ಸಿಕ್ಕ ಬೂವನಹಳ್ಳಿ ನಾಗರಾಜು ಮನೆಯ ಬಾಗಿಲು ತೆರೆದು ತನಿಖೆಗೆ ಸಹಕಾರ ನೀಡಲು ಒಪ್ಪಿಕೊಂಡರು.

ಪುತ್ರನ ಕೈನಲ್ಲಿ ಮನೆಯ ಕೀಲಿ ಕೊಟ್ಟು ಬಾಗಿಲು ತೆರೆದ ಹಿನ್ನೆಲೆಯಲ್ಲಿ ಶುಕ್ರವಾರ ದಿನವಿಡೀ ಅಧಿಕಾರಿಗಳು ಮನೆಯಲ್ಲಿ ತೀವ್ರ ತಪಾಸಣೆ ನಡೆಸಿದರು. ಮಧ್ಯಾಹ್ನ 12ಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿz್ದೆÃನೆ ಎಂಬ ಚೀಟಿ ಜತೆ ಅಧಿಕಾರಿಗಳ ಮುಂದೆ ಹಾಜರಾದ ಬೂವನಹಳ್ಳಿ ನಾಗರಾಜು ನಂತರ ಸುಧೀರ್ಘ ವಿಚಾರಣೆ ಎದುರಿಸಿದರು.

ಲೋಕಾಯುಕ್ತ ಅಧೀಕ್ಷಕ ಅಶೋಕ್ ನೇತೃತ್ವದ ತಂಡ ಮನೆಯಲ್ಲಿ ತಪಾಸಣೆ ನಡೆಸಿದ್ದು ಮಹತ್ವದ ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net