ಎರಡು ಕೆಜಿ ಗಾಂಜಾ ಸಂಗ್ರಹಿಸಿಟ್ಟಿದ್ದ ಸೀಗೇಪಾಳ್ಯದ ಸಂತೋಷ

11kunigal 1 (2)
Published on

ತುಮಕೂರು: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಇಟ್ಟಿದ ಮನೆಯ ಮೇಲೆ ದಾಳಿ ನಡೆಸಿದ ಕುಣಿಗಲ್ ಪೊಲೀಸರು 64050ರೂ. ಮೌಲ್ಯದ 2135 ಗ್ರಾಂ ಗಾಂಜಾ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ಸೀಗೇಪಾಳ್ಯದ ಸಂತೋಷ(22) ಬಂಧಿತ ಆರೋಪಿ. ಮನೆಯಲ್ಲಿ ಅಕ್ರಮವಾಗಿ ಗಾಂಜಾ ಶೇಖರಣೆ ಮಾಡಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ.

ಸಿಪಿಐ ನವೀನ್‌ಗೌಡ ಅವರ ನೇತೃತ್ವದ ಪೊಲೀಸ್ ತಂಡ ಸಂತೋಷನ ಮನೆಯ ಮೇಲೆ ದಾಳಿ ನಡೆಸಿತ್ತು., ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಷಡಾಕ್ಷರಿ, ಯೋಗಿಶ್, ನಟರಾಜ್ ಇದ್ದರು, ತಾಲೂಕು ದಂಡಾಧಿಕಾರಿ ವಿಶ್ವನಾಥ್ ಸ್ಥಳ ಮಹಜರು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net