ಸಮಾಜಕ್ಕೆ ಜೀವನ ಮುಡಿಪಾಗಿಡಿ: ರೋಟರಿ ಫೈಟ್​ ಲೆಫ್ಟಿನೆಂಟ್​ ಕೆ.ಪಿ.ನಾಗೇಶ್​ ಸಲಹೆ

7
Published on

ತುಮಕೂರು: ರೋಟರಿ ತುಮಕೂರು ಸಂಸ್ಥೆಗೆ ಸ್ವಂತ ಕಟ್ಟಡದ ಅಗತ್ಯವಿದ್ದು, ಎಲ್ಲರೂ ಒಂದಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರೋಟರಿ 3190 ಪಿಡಿಜಿ ಮಾರ್ಗದರ್ಶಕ ಫೈಟ್​ ಲೆಫ್ಟಿನೆಂಟ್​ ಕೆ.ಪಿ.ನಾಗೇಶ್​ ಹೇಳಿದರು.

ನಗರದ ಎಸ್​ಐಟಿ ಬಿರ್ಲಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರೋಟರಿ ತುಮಕೂರು ಸಂಸ್ಥೆಯ 2022&23ನೇ ಸಾಲಿನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ನಗರದಲ್ಲಿ ರೋಟರಿ ತುಮಕೂರು ಆರಂಭಗೊಂಡು 65 ವರ್ಷ ತುಂಬಿದ್ದರೂ ಸ್ವಂತ ಕಟ್ಟಡ ಇಲ್ಲ. ಹಾಗಾಗಿ, ರೋಟರಿ ತುಮಕೂರು ಅಧ್ಯಕ್ಷ ಶಿವಣ್ಣ ಅವರ ಜತೆ ಸೇರಿ ಎಲ್ಲರೂ ಸ್ವಂತ ಕಟ್ಟಡಕ್ಕೆ ಮುಂದಾಗುವಂತೆ ಸಲಹೆ ನೀಡಿದರು.

ರೋಟರಿ ಸಂಸ್ಥೆ ಹಲವು ಕೆಲಸಗಳ ಮೂಲಕ ಸಾರ್ವಜನಿಕರ ಮಧ್ಯಕ್ಕೆ ತೆರಳಿ ಅವರ ಕಷ್ಟಗಳನ್ನು ಆಲಿಸುವ ಕೆಲಸ ಮಾಡುತ್ತಿದೆ. ಈ ಕಾರ್ಯ ನಿರಂತರವಾಗಿ ಸಾಗಲಿದೆ. ನಮ್ಮ ರೋಟರಿ ಪ್ರಾಂತಪಾಲ ಅವರು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವಂತೆ ಸೂಚನೆ ನೀಡಿದ್ದಾರೆ ಎಂದರು.

ಅದನ್ನು ಪಾಲಿಸುವುದರ ಜತೆಗೆ, ಇಂದಿನ ಮಕ್ಕಳಿಗೆ ಶಿಕ್ಷಣ ಕಲಿಸಿ, ಉತ್ತಮ ಮಾರ್ಗದಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಿ. ಸಮಾಜದ ಸೇವೆಗೆ ಜೀವನ ಮುಡಿಪಾಗಿಡಿ, ಬದುಕಿನಲ್ಲಿ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ರೋಟರಿ ಜತೆಗೆ ರೋಟರಿ ಫೌಂಡೇಷನ್​ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಫೌಂಡೇಷನ್​ಗೆ ಉದಾರ ದೇಣಿಗೆ ನೀಡುವ ಮೂಲಕ ಮತ್ತಷ್ಟು ಸಮಾಜಸೇವೆಯಲ್ಲಿ ತೊಡಗಲು ಕೋರಿದ ಅವರು, ಹೆಚ್ಚುವರಿ 100 ಸದಸ್ಯರನ್ನು ನೋಂದಾಯಿಸುವಂತೆ ನಿರ್ದೇ ದಶನ ನೀಡಿದರು.

ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ, ಭಾರತದಲ್ಲಿಯೇ ಕನ್ನಡ ಚಲನಚಿತ್ರರಂಗ ಬಹಳ ಕಡಿಮೆ ಮಾರುಕಟ್ಟೆಯನ್ನು ಹೊಂದಿದ್ದರೂ ಹಿರಿಯರ ಮಾರ್ಗದರ್ಶನ ಹಾಗೂ ಪದಾಧಿಕಾರಿಗಳ ಇಚ್ಛಾಶಕ್ತಿಯಿಂದ ಸ್ವಂತ ಕಟ್ಟಡ ಹೊಂದಿದೆ. ಹಾಗಾಗಿ ಸ್ವಂತ ಕಟ್ಟಡದ ಜತೆಗೆ ಸಮಾಜ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿದೆ. ಹಾಗೆಯೇ ರೋಟರಿ ಎಂದರೆ ಇಂಗ್ಲೀಷ್​, ಈ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಸಿ ತಪ್ಪಿಲ್ಲ. ಆದರೆ ಕನ್ನಡಕ್ಕೆ ಆದ್ಯತೆ ನೀಡಿ, ನಿಮ್ಮ ಮಕ್ಕಳಿಗೆ ರಾಮಾಯಣ, ಮಹಾಭಾರತ ಓದಿಸಿ. ಅದರಲ್ಲಿ ಮಾನವೀಯ ಗುಣಗಳಿವೆ ಎಂದು ಹೇಳಿದರು.

ಕಾರ್ಯದರ್ಶಿ ಭಾಗ್ಯಲಕ್ಷಿ$್ಮ ನಾಗರಾಜು ವಾರ್ಷಿಕ ವರದಿ ಮಂಡಿಸಿದರು. ವಿಶ್ವನಾಥ್​ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಬಡ ಮಕ್ಕಳಿಗೆ ನೋಟ್​ ಪುಸ್ತಕ, ರೈತರಿಗೆ ಕೃಷಿ ಪರಿಕರ, ಅಂಧರಿಗೆ ವಾಕಿಂಗ್​ ಸ್ಟಿಕ್​ ವಿತರಿಸಲಾಯಿತು.

ರೋಟರಿ ಅಧ್ಯಕ್ಷ ಎ.ಎಸ್​.ಬಸವರಾಜ್​ ಹಿರೇಮಠ್​, ರೋಟರಿ ತುಮಕೂರು ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಎಂ.ಎಸ್​.ಉಮೇಶ್​, ಉಪಾಧ್ಯೆ ರಾಜೇಶ್ವರಿ ರುದ್ರಪ್ಪ, ಕಾರ್ಯದರ್ಶಿ ಎನ್​.ಸಿ.ಉಮೇಶ್​, ಸಹ ಕಾರ್ಯದರ್ಶಿ ಡಿ.ಎಂ.ಸತೀಶ್​, ಮೀನಾ ಶಿವಣ್ಣ, ಬಿಳಿಗೆರೆ ಶಿವಕುಮಾರ್​, ಕೆ.ಎಸ್​.ಚೇತನ್​, ಎಂ.ಎಸ್​. ಉಮೇಶ್​, ಎಸ್​.ಎಲ್​. ಕಾಡದೇವರ ಮಠ್​, ಟಿ.ಆರ್​. ಸದಾಶಿವಯ್ಯ, ಭಾಗ್ಯಲಕ್ಷಿ$್ಮ, ಎನ್​.ಸಿ.ಉಮೇಶ್​, ವಿಶ್ವನಾಥ್​ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಸೂರಿಲ್ಲದವರನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಕೊಡುವ ಕೆಲಸ ರೋಟರಿ ಸಂಸ್ಥೆಯಿಂದ ನಡೆಯಲಿ. ಪ್ರತಿ ಅಧ್ಯಕ್ಷರ ಅವಧಿಯಲ್ಲಿ ಒಂದು ಬಡ ಕುಟುಂಬವನ್ನು ಗುರುತಿಸಿ, ಅವರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡಬೇಕು. ಈ ಕಾಯಕ ಈ ಜಿಲ್ಲೆಯಿಂದ ಆರಂಭವಾಗಲಿ.

ರೇಣುಕಾ ಪೀಠಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮೀಜಿ ಸೋಲೂರಿನ ಬ್ರಹ್ಮಶ್ರೀ ನಾರಾಯಣಗುರು ಮಠ

ಮುಂದಿನ ಒಂದು ವರ್ಷದಲ್ಲಿ ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ, ಬಡ ರೈತರಿಗೆ ವ್ಯವಸಾಯದ ಸಲಕರಣೆ ನೀಡುವುದು, ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರಿನ ಟನೆ ಸ್ಥಾಪನೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು.
ಜೆ.ಪಿ.ಶಿವಣ್ಣ ರೋಟರಿ ತುಮಕೂರು ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net