ವಯೋವೃದ್ಧೆ ಚನ್ನಕ್ಕನ ಪಿಂಚಣಿಗೆ ಮರುಚಾಲನೆ; ಜನತಾದರ್ಶನ ಎಫೆಕ್ಟ್

PVGGGG
Published on

ತುಮಕೂರು: ಪಾವಗಡದಲ್ಲಿ ಜನವರಿ 9ರಂದು ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ವೃದ್ದಾಪ್ಯವೇತನ ಸ್ಥಗಿತಗೊಂಡಿದ್ದ ಬಗ್ಗೆ ದೂರು ನೀಡಿದ್ದ ವೈ.ಎನ್.ಹೊಸಕೋಟೆ ಅಂಬೇಡ್ಕರ್ ನಗರದ 85 ವರ್ಷದ ಚನ್ನಕ್ಕ ಅವರ ಸಮಸ್ಯೆ ಭಗೆಹರಿದಿದೆ.

ವಯೋವೃದ್ಧೆ ಚನ್ನಕ್ಕ ಅವರಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆ ಫಲಾನುಭವಿಯಾಗಿದ್ದು ಏಕಾಏಕಿ ಹಣ ಬರುವುದೇ ಸ್ಥಗಿತವಾಗಿ ಜೀವನ ನಿರ್ವಹಣೆಯೇ ಕಷ್ಟವಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್‌ಗೆ ದೂರು ನೀಡಿ ಮನವಿ ಮಾಡಿದ್ದರು.

ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನಕ್ಕೆ ಸಂಬAಧಿಸಿದAತೆ ಎನ್‌ಪಿಸಿಐ ಮ್ಯಾಪಿಂಗ್ ಮಾಡಿ ಪಿಂಚಣಿ ಮರುಚಾಲನೆಗೊಳಿಸಿದ್ದಾರೆ. ವೈ.ಎನ್. ಹೊಸಕೋಟೆ ಹೋಬಳಿ ರಾಜಸ್ವ ನಿರೀಕ್ಷಕ ಕಿರಣ್‌ಕುಮಾರ್ ಫಲಾನುಭವಿ ಚನ್ನಕ್ಕ ಅವರಿಗೆ ಮಂಜೂರಾತಿ ಆದೇಶದ ಪ್ರತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net