

ತುಮಕೂರು: ಯುದ್ದದಂತಹ ಸಂದರ್ಭಗಳಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಪೌರ ರಕ್ಷಣಾ ಸ್ವಯಂ ಸೇವಕರ ನೇಮಕಾತಿಗಾಗಿ ಮೇ.31ರ ವರೆಗೆ ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಗೋಪಾಲ್ ತಿಳಿಸಿದ್ದಾರೆ.
ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮೇ 31ರೊಳಗಾಗಿ ಸಲ್ಲಿಸಬೇಕು. ನಿಗಧಿತ ಅರ್ಜಿ ನಮೂನೆಯನ್ನು ಬಟವಾಡಿಯಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರ ಕಚೇರಿ ಅಥವಾ ಜಾಲತಾಣ: hgcd.karnataka.gov.in
ಅನ್ನು ಸಂಪರ್ಕಿಸಿ ಪಡೆಯಬಹುದು.
ಮಾಹಿತಿಗೆ ದೂ.0816 2009116, ಮೊ.9448544080, 9901316107 ಸಂಪರ್ಕಿಸಿ.