ಹೆಸರು ಬೆಳೆಗೆ ಹಳದಿ ಮಚ್ಚೆ ರೋಗ: ನಿರಂತರ ಮಳೆಯೇ ನಷ್ಟಕ್ಕೆ ಕಾರಣ

08 tpt 1- Crop Condition
Published on

ಮೂರ್ತಿ ಟಿ.ಸಿ.ಎಸ್​. ತಿಪಟೂರು
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಸರು ಕಾಳು ಬೆಳೆಗೆ ಹಳದಿ ಮಚ್ಚೆ ರೋಗ ಕಾಣಿಸಿಕೊಂಡಿದ್ದು, ಸಲು ನಾಶವಾಗುವ ಭೀತಿ ಎದುರಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ರೈತರದ್ದಾಗಿದೆ.

ಬಿತ್ತನೆಯಿಂದ ಹೂವು ಕಚ್ಚುವ ಹಂತದವರೆಗೂ ಹಸಿರಿನಿಂದ ಕಂಗೊಳಿಸುತ್ತಿದ್ದ ಹೆಸರು ಈಗ ಕಳೆದ ಒಂದು ತಿಂಗಳಿನಿಂದ ನಿರಂತರ ಮಳೆಯ ಕಾರಣ ಶೀತ ಹೆಚ್ಚಾಗಿ ಕೊಳೆಯುವ ಸ್ಥಿತಿ ತಲುಪಿದೆ. ಕಷ್ಟಪಟ್ಟು ಫಸಲು ಕೊಯ್ದರೂ ಹೆಸರು ಕಾಳು ಕಪು$್ಪ ಬಣ್ಣಕ್ಕೆ ತಿರುಗಿರುತ್ತದೆೆ. ಇದು ಮಾರುಕಟ್ಟೆಯಲ್ಲಿ ಮೂರನೇ ದರ್ಜೆಯದ್ದಾಗಿದ್ದು, ಬೇಡಿಕೆ ಇಲ್ಲದಂತಾಗಿದೆ. ಬೇಡಿಕೆ ಇದ್ದರೂ ಬಾಯಿಗೆ ಬಂದ ಬೆಲೆಗೆ ಕೇಳುತ್ತಾರೆ.

ತಾಲೂಕು ಕೃಷಿ ಇಲಾಖೆಯೂ ಹಳದಿ ಮಚ್ಚೆ ರೋಗಕ್ಕೆ ತುತ್ತಾಗಿರುವ ಹೆಸರು ಕಾಳು ಸಲನ್ನು ಸಮೀೆ ಮಾಡಿ ಪರಿಶೀಲಿಸಿದ್ದು, ಪೈರಿನ ರಕ್ಷಣೆಗೆ ಇಮಿಡಾಕ್ಲೋಫ್ರಿಡ್​&ಶೇ.48 ಎಫ್​.ಎಲ್​. ಅಥವಾ ಇಮಿಡಾ ಕ್ಲೋಫ್ರಿಡ್​ ಶೇ.17.8 ಎಸ್​.ಎಲ್​.ಕ್ರಿಮಿನಾಶಕವನ್ನು ಒಂದು ಲೀಟರ್​ ನೀರಿಗೆ 5 ಎಂ.ಎಲ್​.ನಂತೆ ಬಳಸಿ ಸಿಂಪಡಿಸಲು ಸಲಹೆ ನೀಡಿದೆ. ಕ್ರಿಮಿನಾಶಕಗಳನ್ನು ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿವೆ ಎಂದು ತಿಳಿಸಿದೆ. ಆದರೆ ನಿರಂತರ ಮಳೆ ಸುರಿಯುತ್ತಿರುವ ಕಾರಣ ಹೆಸರು ಸಲಿಗೆ ಕ್ರಿಮಿನಾಶಕ ಸಿಂಪಡಿಸಿದರೂ ಲಿತಾಂಶ ಶೂನ್ಯ ಎಂಬಂತಾಗಿದೆ.

ತಾಲೂಕಿನಲ್ಲಿ ಈ ವರ್ಷ ವಾಡಿಕೆಯಂತೆ 4,600 ಹೆಕ್ಟೇರ್​ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆಗೆ ಆಂದಾಜಿಸಲಾಗಿತ್ತಾದರೂ ಕಸಬಾ ಹೋಬಳಿಯಲ್ಲಿ 750, ಕಿಬ್ಬನಹಳ್ಳಿ 350, ನೊಣವಿನಕೆರೆ 680 ಹಾಗೂ ಹೊನ್ನವಳ್ಳಿ 2,905 ಹೆಕ್ಟೇರ್​ ಸೇರಿ ಒಟ್ಟು 4,685 ಹೆಕ್ಟೇರ್​ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಹಿಂಗಾರು ಮತು ್ತಮುಂಗಾರು ಮಳೆಯನ್ನು ನೋಡಿಕೊಂಡು ಸಕಾಲದಲ್ಲಿ ಬಿತ್ತನೆ ಮಾಡಲಾಗಿದೆ. ಅತಿವೃಷ್ಠಿ ಆಗದೇ ಇದ್ದಿದ್ದರೆ, ಎಕರೆಗೆ 2&3 ಕ್ವಿಂಟಾಲ್​ ಇಳುವರಿಯಂತೆ ಈ ಬಾರಿ 35,137 ಕ್ವಿಂಟಾಲ್​ ಹೆಸರು ಸಲನ್ನು ನಿರೀಸಬಹುದಿತ್ತು. ಸದ್ಯದ ವಾತಾವರಣದಿಂದ ಸುಮಾರು 10&11 ಸಾವಿರ ಕ್ವಿಂಟಾಲ್​ನಷ್ಟು ಹೆಸರು ಬೆಳೆ ರೈತರ ಕೈ ಸೇರಲಿದೆ. ಗುಣಮಟ್ಟ ಕೂಡ ಕಳೆಗುಂದಲಿದೆ.

ಹವಾಮಾನ ಇಲಾಖೆ ವರದಿ: ಪ್ರಸ್ತುತ ಸುರಿಯುತ್ತಿರುವ ಪುನರ್ವಸು ಮಳೆಯು ಜು.19ರವರೆಗೂ ಮುಂದುವರಿಯಲಿದೆ. ಜಿಲ್ಲಾದ್ಯಂತ ಹಗುರದಿಂದ ಸಾಧಾರಣ ಮಳೆ, ಮೋಡ ಕವಿದ ವಾತಾವರಣ, ಮತ್ತು ಕಡಿಮೆ ಉಷ್ಣಾಂಶ ಇದ್ದು, ಗಾಳಿಯ ವೇಗ ಹೆಚ್ಚಾಗಿರುವ ಕಾರಣ ಬೆಳೆ ಮತ್ತು ಜಾನುವಾರುಗಳಲ್ಲಿ ರೋಗ ಮತ್ತು ಕೀಟಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ಜಿಲ್ಲಾ ಹವಾಮಾನ ಇಲಾಖೆ ಎಚ್ಚರಿಸಿದೆ.


ವಾಡಿಕೆಗಿಂತ ಹೆಚ್ಚು ಮಳೆ: ತಾಲೂಕಿನಲ್ಲಿ 245 ಮಿ.ಮೀ. ವಾಡಿಕೆ ಮಳೆ ಪ್ರಮಾಣ ನಿರೀಸಿತ್ತು. ಆದರೆ ಈ ಬಾರಿ 504 ಮಿ.ಮೀ. ಶೇ. 105 ಅಧಿಕ ಪ್ರಮಾಣ ಮಳೆಯಾಗಿದೆ. ಇದೇ ರೀತಿ ಕಸಬಾ ಹೋಬಳಿ 245 ಮಿ.ಮೀ. ಬದಲಿಗೆ 485 ಮಿ.ಮೀ., ಹೊನ್ನವಳ್ಳಿ 232 ಮಿ.ಮೀ. ಬದಲಿಗೆ 477 ಮಿ.ಮೀ., ಕಿಬ್ಬನಹಳ್ಳಿ 192 ಮಿ.ಮೀ. ಬದಲಿಗೆ 160.95 ಮಿ.ಮೀ. ಹಾಗೂ ನೊಣವಿನಕೆರೆಯಲ್ಲಿ 229 ಮಿ.ಮೀ ಬದಲಿಗೆ 560 ಮಿ.ಮೀ. ನಿರೀೆಗಿಂತ ಮಳೆ ಆಗಿದೆ. ಕಿಬ್ಬನಹಳ್ಳಿಯಲ್ಲಿ ವಾಡಿಕೆ ಮಳೆಗಿಂತ 160.95 ಮಿ.ಮೀ ಅಧಿಕ ಮಳೆ ಸುರಿದಿದೆ.

ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಹಳದಿ ರೋಗಕ್ಕೆ ಕ್ರಿಮಿನಾಶಕ ಸಿಂಪಡಿಸಿದರೂ ಪ್ರಯೋಜನವಿಲ್ಲದಂತಾಗಿದೆ. ಬಹುಶ@ ಇಳುವರಿಯಲ್ಲಿ ಶೇ.5 ಕಡಿಮೆ ಆಗಬಹುದು.

ಚನ್ನಕೇಶವ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ

ಹೊನ್ನವಳ್ಳಿ ಹೋಬಳಿ ಭಾಗದಲ್ಲಿ ಹೆಚ್ಚು ಬೆಳೆ ನಾಶವಾಗಿದೆ. ಹೂಡಿದ ಬಂಡವಾಳವೂ ವಾಪಸ್​ ಬಾರದ ಸ್ಥಿತಿ ಇದೆ. ಇನ್ನು ವಿಮಾ ಪರಿಹಾರ ಕೇಳಿದರೆ, ಮೂರರಿಂದ ಆರು ವರ್ಷದ ಸರಾಸರಿ ಬೆಳೆ ಇಳುವರಿ ಆಧಾರದಲ್ಲಿ ಪರಿಹಾರ ನಿಗದಿ ಮಾಡುತ್ತಾರೆ. ಅಕಸ್ಮಾತ್​ ಈ ಮಧ್ಯೆಉತ್ತಮ ಬೆಳೆ ಆಗಿದ್ದರೆ ಅದನ್ನೇ ಮಾನದಂಡವಾಗಿ ಪರಿಗಣಿಸಿ ಪರಿಹಾರ ತಿರಸ್ಕರಿಸುತ್ತಾರೆ. ಇದರ ಬಗ್ಗೆ ಸರ್ಕಾರ ಯೋಚಿಸಬೇಕು.

ಟಿ.ಎಂ.ಹರೀಶ್​, ರೈತ, ತಿಮ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net