

ತುಮಕೂರು:- ಸೋಮವಾರ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆಯಿಂದ ನಗರವಾಸಿಗಳು ಖುಷಿಯಾಗಿದ್ದರು. ಮನೆಯ ಮೂಲೆಯಲ್ಲಿದ್ದ ಕೊಡೆಗಳು, ಸ್ಪಟೆರ್, ರೈನ್ ಕೋಟ್ ಹೊರತೆಗೆದು ದಿನನಿತ್ಯದ ಚಟುವಟಿಕೆಗಳಿಗೆ ರಸ್ತೆಗಿಳಿಸಿದರು.
ವಾಯು ವಿಹಾರಿಗಳು, ಕೆಲಸಕ್ಕೆ ತೆರಳುವವರು, ಶಾಲೆ, ಕಾಲೇಜುಗಳಿಗೆ ತೆರಳುವ ಮಕ್ಕಳು ಸೋನೆ ಮಳೆಯಲ್ಲಿಯೇ ಕೊಡೆಯ ಆಶ್ರಯ ಪಡೆದರು. ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಮಳೆ ನಡುವೆಯೇ ಸಾಗಿದರು.
ಪೋಷಕರು ಕೊಡೆಹಿಡಿದು ಮಳೆಯಲ್ಲಿಯೇ ಮಕ್ಕಳನ್ನು ಶಾಲೆಗಳಿಗೆ ಬಸ್ ಹತ್ತಿಸಿದರು, ಇನ್ನು ಕೆಲವರು ದ್ವಿಚಕ್ರವಾನದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ದೃಶ್ಯ ಕಣಿಸಿದವು. ಜಿಲ್ಲೆಯೆಲ್ಲೆಡೆ ಜಿಟಿಜಿಟಿ ಮಳೆ ಸುರಿದಿದ್ದು ಎಲ್ಲೆಡೆಯೂ ಖುಷಿಗೆ ಕಾರಣವಾಯಿತು.
ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಜಿಟಿಜಿಟಿ ಮಳೆಯಿಂದಾಗಿ ಜನಸಾಮಾನ್ಯರು ಹೊರಗೆ ಬರಲು ಹಿಂದೇಟು ಹಾಕುವಂತಾಗಿತ್ತು.