ಮದ್ಯ ಮಾರಾಟ ನಿಷೇಧ

Liquor Mart
Published on

ತುಮಕೂರು: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಗ್ರಾಪಂ ಸದಸ್ಯ ಸ್ಥಾನಗಳಿಗೆ ಮೇ.25ರಂದು ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭಕಲ್ಯಾಣ್​ ಆದೇಶ ಹೊರಡಿಸಿದ್ದಾರೆ.

ನಿಷೇದಾಜ್ಞೆ ಮೇ.23ರ ಸಂಜೆ 5 ರಿಂದ 25ರ ಸಂಜೆ 5ರ ವರೆಗೂ ಜಾರಿಯಲ್ಲಿರುತ್ತದೆ. ನಿಷೇದಾವಧಿಯಲ್ಲಿ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಮದ್ಯದಂಗಡಿಯನ್ನು ಮುಚ್ಚಬೇಕು. ಗ್ರಾಮ ಪಂಚಾಯತಿ ಸ್ಥಾನಗಳಿಗೆ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿ ಚುನಾವಣೆ ನಡೆಯಲಿದ್ದಲ್ಲಿ ಈ ನಿಷೇಧಾದೇಶ ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ತುಮಕೂರು ತಾಲೂಕು 37-ಬೆಳಗುಂಬ ಗ್ರಾಪಂ ವ್ಯಾಪ್ತಿಯ ವಡ್ಡರಹಳ್ಳಿ ಕ್ಷೇತ್ರ ಹಾಗೂ 38-ಹೆಗ್ಗೆರೆ ಗ್ರಾಪಂ ವಕ್ಕೋಡಿ-1; ಗುಬ್ಬಿ ತಾಲೂಕು 26-ಕುನ್ನಾಲ ಗ್ರಾಪಂ ಜೀಗನಹಳ್ಳಿ, ತಿಪಟೂರು ತಾಲೂಕು 13-ಹಿಂಡಿಸ್ಕೆರೆ ಗ್ರಾಪಂ ಹಿಂಡಿಸ್ಕೆರೆ, ಚಿಕ್ಕನಾಯಕನಹಳ್ಳಿ ತಾಲೂಕು 23-ಮುದ್ದೇನಹಳ್ಳಿ ಗ್ರಾಪಂ ಆಲದಕಟ್ಟೆ, ತುರುವೇಕೆರೆ ತಾಲೂಕು 26-ಹುಲ್ಲೇಕೆರೆ ಗ್ರಾಪಂ ಬಳ್ಳೆಕಟ್ಟೆ, ಮಧುಗಿರಿ ತಾಲೂಕು 3-ದೊಡ್ಡವಿರಗೊಂಡನಹಳ್ಳಿ ಗ್ರಾಪಂ ಗುಂಡ್ಲಹಳ್ಳಿ, 5-ಮರುವೇಕೆರೆ ಗ್ರಾಪಂ ಬಂದ್ರೇಹಳ್ಳಿ ಹಾಗೂ 18-ಮುದ್ದೇನಹಳ್ಳಿ ಗ್ರಾಪಂ ಪೋಲೇನಹಳ್ಳಿ, ಪಾವಗಡ ತಾಲೂಕು 7-ಕನ್ನಮೇಡಿ ಗ್ರಾಪಂ ಕಿಲಾರ್ಲಹಳ್ಳಿ, 8-ಬ್ಯಾಡನೂರು ಗ್ರಾಪಂ ಗುಂಡ್ಲಾರಹಳ್ಳಿ, 32-ಅರಸೀಕೆರೆ ಗ್ರಾಪಂ ಅರಸೀಕೆರೆ-2 ಹಾಗೂ 30-ಚನ್ನಕೇಶವಪುರ ಗ್ರಾಪಂ ಕೊತ್ತೂರು-2 ಸೇರಿದಂತೆ ಒಟ್ಟು 13 ಗ್ರಾಪಂ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net