ಉದ್ಯಮಿಗೆ ಕೊಲೆ ಬೆದರಿಕೆ ಆರೋಪ; ರೌಡಿಶೀಟರ್ ಸುಜಯ್ ಭರ್ಗವನ ಮನೆ ಮೇಲೆ ಪೊಲೀಸರ ದಾಳಿ

SJ_
Published on

ತುಮಕೂರು: ಜಮೀನು ವಿವಾದಕ್ಕೆ ಸಂಬAಧಿಸಿದAತೆ ನಗರದ ಖ್ಯಾತ ಉದ್ಯಮಿಯೊಬ್ಬರ ಕೊಲೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಹೊಸಬಡಾವಣೆ ಪೊಲೀಸರು ರೌಡಿಶೀಟರ್ ಸುಜಯ್ ಭರ್ಗವನ ಮನೆಯ ಮೇಲೆ ದಾಳಿ ನಡೆಸಿ, ತೀವ್ರ ತಪಾಸಣೆ ನಡೆಸಿದ್ದಾರೆ.

ನಗರದ ಕುವೆಂಪು ನಗರದಲ್ಲಿರುವ ಸುಜಯ್ ಭರ್ಗವನ ನಿವಾಸ ಮೇಲೆ ಶನಿವಾರ ಬೆಳಗ್ಗೆ ತಿಲಕ್‌ಪಾರ್ಕ್ ಸಿಇಒ ಪುರುಷೋತ್ತಮ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕೊಲೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸುಜಯ್‌ಭಾರ್ಗವ ಜಮೀನು ವಿವಾದಕ್ಕೆ ಸಂಬAಧಿಸಿದAತೆ ನಗರದ ಉದ್ಯೋಮಿಯೊಬ್ಬರಿಗೆ ಪ್ರಾಣ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.

ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಖುದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಮುಜುಗರ ಉಂಟುಮಾಡಿದ್ದು ರೌಡಿಗಳನ್ನು ಮಟ್ಟಹಾಕಲು ಜಿಲ್ಲಾ ಪೊಲೀಸರಿಗೆ ತಾಕೀತು ಮಾಡಿರುವ ಹಿನ್ನೆಲೆಯಲ್ಲಿ ರೌಡಿಗಳ ಹುಟ್ಟಡಗಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net