ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆ

02TMK_Phala_Pushpa_Managoli 1
Published on

ತುಮಕೂರು: ತೋಟಗಾರಿಕೆ ಇಲಾಖೆ ಜ.26 ರಿಂದ 28ರ ವರೆಗೆ 3 ದಿನಗಳ ಕಾಲ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ತೋಟಗಾರಿಕೆ ಫಲ ಪುಷ್ಪ ಪ್ರದರ್ಶನ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜಿಸಿದೆ.

ಸಾರ್ವಜನಿಕ ತೋಟ, ಸಂಸ್ಥೆಯ ತೋಟ, ಆಸ್ಪತ್ರೆ ತೋಟ, ಶಿಕ್ಷಣ ಸಂಸ್ಥೆಯ ತೋಟ, ಆಡಳಿತ ಕಚೇರಿ ತೋಟ, ಹೋಟೆಲ್​ ತೋಟ, ಸಿನಿಮಾ ಥಿಯೇಟರ್​ಗಳ ತೋಟ, ನರ್ಸಿಂಗ್​ ಹೋಮ್​ ತೋಟ, ಗುಲಾಬಿ ತೋಟ, ಔದ್ಯೋಗಿಕ ತೋಟ, ಅಥಿತಿ ಗೃಹಗಳ ತೋಟ, ಕ್ವಾಟ್ರಸ್​ ತೋಟ, ಸಾರ್ವಜನಿಕ ಉದ್ಯಾನವನ, ಖಾಸಗಿ ತೋಟ, ಖಾಸಗಿ-ಸರ್ಕಾರಿ ಸಂಸ್ಥೆಗಳ, ಮನೆಗಳ ಮುಂಭಾಗದ ಕೈತೋಟ, ಅಲಂಕಾರಿಕ ಉದ್ಯಾನವನಗಳ ತೋಟ, ಛಾವಣಿ ತೋಟ, ಮನೆಗಳ ಒಳಾಂಗಣ ಅಲಂಕಾರ ತೋಟ, ಕುಂಡದಲ್ಲಿ ಬೆಳೆಸಿದ ಅಲಂಕಾರಿಕ ಗಿಡಗಳು, ತರಕಾರಿಗಳು, ಹಣ್ಣುಗಳ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ಖಾಸಗಿ ಸಂಸ್ಥೆಗಳಿಗೆ 50 ರೂ. ಅರ್ಜಿ ಶುಲ್ಕವನ್ನು ನಿಗಧಿಪಡಿಸಲಾಗಿದೆ. ಸರ್ಕಾರಿ ಸಂಸ್ಥೆಯವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಜ.22ರೊಳಗೆ ಸಲ್ಲಿಸಬಹುದು. ಮಾಹಿತಿಗೆ ಮೊ.9741928966 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net