16 ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್​

Adalath
Published on

ತುಮಕೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕ್ಟೋಬರ್​ 30ರಂದು ಜಿಲ್ಲೆಯ 16 ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್​ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ತಿಳಿಸಿದ್ದಾರೆ.

ಅಕ್ಟೋಬರ್​ 30ರಂದು ಜಿಲ್ಲೆಯ ಶಿರಾ ತಾಲೂಕಿನ ಲಕ್ಷಿ$್ಮಸಾಗರ, ತುರುವೇಕೆರೆ ತಾಲೂಕಿನ ಹಡವನಹಳ್ಳಿ, ತಿಪಟೂರು ತಾಲೂಕಿನ ಬಳುವನೇರಲು, ಮಧುಗಿರಿಯ ಬ್ಯಾಲ್ಯ, ತುಮಕೂರು ತಾಲೂಕಿನ ನಾಗವಲ್ಲಿ ಹಾಗೂ ಅರೆಯೂರು; ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ, ಚೌಳಕಟ್ಟೆ ಹಾಗೂ ತಿಮ್ಮನಹಳ್ಳಿ, ಕುಣಿಗಲ್​ ತಾಲೂಕಿನ ಎಡೆಯೂರು, ಬೇಗೂರು, ಭಕ್ತರಹಳ್ಳಿ ಹಾಗೂ ಯಲಿಯೂರು; ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ, ಪಾವಗಡ ತಾಲೂಕಿನ ನಲಿಗಾನಹಳ್ಳಿ; ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಗ್ರಾಪಂಗಳಲ್ಲಿ ಪಿಂಚಣಿ ಅದಾಲತ್​ ನಡೆಯಲಿದೆ.

ಈ ಅದಾಲತ್​ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು-ಕೊರತೆ ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಪಿಂಚಣಿದಾರರು ಅದಾಲತ್​ನಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ಅವರು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net