ಸಿದ್ದರಾಮಯ್ಯ ನಂತರ ಪರಮೇಶ್ವರ್ ರಾಜ್ಯದ ಸಿಎಂ; ಸಚಿವ ಕೆ.ಎನ್.ರಾಜಣ್ಣ ಹೊಸ ಬಾಂಬ್

29TMK_DCM_Matt_with_KNR1
Published on

ತುಮಕೂರು: ಸಿದ್ದರಾಮಯ್ಯ ಅವರಿಗೆ ಸಾಕು ಎನ್ನಿಸಿದ ದಿನ ರಾಜ್ಯದಲ್ಲಿ ಡಾ.ಜಿ.ಪರಮೇಶ್ವರ ಸಿಎಂ ಅಗಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಿಎಂ ಬದಲಾವಣೆ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟುಹಾಕಿದರು.

ನಗರದಲ್ಲಿ ಪೊಲೀಸ್ ವಸತಿ ಗೃಹ ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಜತೆ ವೇದಿಕೆ ಹಂಚಿಕಂಡು ಮಾತನಾಡಿದ ಅವರು, ಸಿದ್ದರಾಮಯ್ಯ ನಂತರ ಪರಮೇಶ್ವರ ಸಿಎಂ ಅಗಬೇಕು, ಇದಕ್ಕಾಗಿ ನಾವೆಲ್ಲಾ ಅವರ ಬೆಂಬಲಕ್ಕಿರುತ್ತೇವೆ ಎಂದರು.

ರಾಜಕೀಯದಲ್ಲಿ ಮುಂದೆ ಏನು ಬೇಕಾದರೂ ಆಗಬಹುದು, ಭವಿಷ್ಯದಲ್ಲಿ ಪರಮೇಶ್ವರ್ ಅವರಿಗೆ ಅದೃಷ್ಟವಿದೆ, ನಮ್ಮ ಜಿಲ್ಲೆಯಿಂದ ಒಬ್ಬರು ಸಿಎಂ ಆದರೆ ನಾವು ಅವರ ಪರವಗಿರುತ್ತೇವೆ, ಸಿದ್ದರಾಮಯ್ಯ ಬೇಡ ಎನ್ನುವವರೆಗೂ ನಾವು ಅವರ ಪರವಾಗಿರುತ್ತೇವೆ, ನಂತರ ಪರಮೇಶ್ವರ ಪರವಾಗಿರೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net