ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ- ಸಮೀಕ್ಷೆ

School-going-children
Published on

ತುಮಕೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ದಾಖಲು ಜು.15ರಿಂದ ವಿಶೇಷ ಅಭಿಯಾನ ಆರಂಭಿಸಲಾಗಿದ್ದು ಜು.31ರ ವರೆಗೂ ಮನೆಮನೆ ಸಮೀಕ್ಷೆ ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ.

ಹೈಕೋರ್ಟ್​ ನಿರ್ದೇಶನದ ಪ್ರಕಾರ ಹಾಗೂ ಆರ್​ಟಿಇ ಕಾಯ್ದೆ ಅನ್ವಯ ಪ್ರತಿ ಮಗು 8 ವರ್ಷಗಳ ಶಾಲಾ ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಮೂಲಭೂತ ಹಕ್ಕು. ಇದನ್ನು ಒದಗಿಸಲು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಪಂಚಾಯತ್​ ರಾಜ್​ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ.'

ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕೈಗೊಂಡು ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಪಡೆದು ಮೊಬೈಲ್​ ಆಪ್​ ಮೂಲಕ ದಾಖಲು ಮಾಡಿಕೊಳ್ಳಲಾಗುವುದು.

ಸಮೀಕ್ಷೆಯನ್ನು ನಗರ, ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳ, ನಗರ ಸ್ಥಳಿಯ ಸಂಸ್ಥೆಯ ಜನ ವಸತಿ ಪ್ರದೇಶಗಳಲ್ಲಿ, ಕೈಗಾರಿಕಾ ಸ್ಥಳಗಳು, ಕೃಷಿ ಕಾರ್ಮಿಕ ವಲಯಗಳು, ಕೊಳಗೇರಿ ಪ್ರದೇಶಗಳು, ಬಸ್ಸು, ರೈಲ್ವೆ ನಿಲ್ದಾಣ ಧಾರ್ಮಿಕ ಕೇಂದ್ರಗಳು, ಅನಾಥಾಶ್ರಮಗಳು, ಬಂದಿಖಾನೆ, ಆಸ್ಪತ್ರೆ, ಹೋಟೆಲ್​, ಚಿತ್ರಮಂದಿರಗಳು, ಇಟ್ಟಿಗೆ ತಯಾರಿಸುವ ಸ್ಥಳ, ಬೀದಿಯಲ್ಲಿರುವ ಮಗು, ಅಲೆಮಾರಿ ಕುಟುಂಬದ ಮಗು ಹಾಗೂ ಇತರೆ ಸ್ಥಳಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.

ಯಾರಾದರೂ ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡು ಬಂದಲ್ಲಿ ಅವರಿಗೆ ಶಾಲೆಗಳಿಗೆ ಮರು ದಾಖಲಾತಿಯನ್ನು ಮಾಡಿಕೊಳ್ಳಲಾಗುವುದು.

ಸದರಿ ಸಮೀಕ್ಷಾ ಕಾರ್ಯಕ್ಕೆ ಸಾರ್ವಜನಿಕರಿಂದ ಸಹಕಾರ ಅಗತ್ಯವಿದ್ದು ಪ್ರತಿ ಮಗು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ಅರ್ಹ ವಯಸ್ಸಿನ ಮಗು ಶಾಲೆಯನ್ನು ಬಿಟ್ಟಿದ್ದಲ್ಲಿ ದೂರವಾಣಿ ಸಂಖ್ಯೆಗೆ 0816- 2272358, 2955404, ಮೊ.9480695360, 9480695370 ಕರೆ ಮಾಡಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net