

ತುಮಕೂರು: ತಾಲೂಕಿನಲ್ಲಿ 2014-15ನೇ ಸಾಲಿನಲ್ಲಿ 3 ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ತಲಾ 5 ಲಕ್ಷ ರೂ. ಅಧಿಕಾರಿಗಳ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವುದಕ್ಕೆ ಶಾಸಕ ಬಿ.ಸುರೇಶ್‌ಗೌಡ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ತುಮಕೂರು ತಾಪಂ ಸಭಾಂಗಣದಲ್ಲಿ ಇಂದು ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮತನಾಡಿ, ಕಟ್ಟಡ ನಿರ್ಮಾಣಕ್ಕೆ ಅನುದಾನ ಸಾಲದು ಎಂಬ ಕಾರಣಕ್ಕೆ ಕಳೆದ ಎಂಡು ವರ್ಷದಿಂದ ಇದುವರೆಗೂ ಕಾಮಗಾರಿ ಕೈಗೊಂಡಿಲ್ಲ ಎಂದರು.
ಸರ್ಕಾರ ನೀಡಿದ ಅನುದಾನದ ಹಣವನ್ನು ಡಿಸಿ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ, ಅಧಿಕಾರಿಗಳ ವಲಯದಲ್ಲಿ ಇದೊಂದು ದಂಧೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಅನುದಾನದ ಸಾಲದು ಎಂದಾದರೆ ಹೆಚ್ಚುವರಿ ಅನುದಾನಕ್ಕೆ ಪ್ರಾಸ್ತಾವನೆ ಸಲ್ಲಿಸಬೇಕು. ಇಲ್ಲವೆ ವಾಪಸ್ ಕಳುಹಿಸಬೇಕು. ಹೀಗೆ ಬ್ಯಾಂಕಿನಲ್ಲಿ ಇಟ್ಟರೆ ಉದ್ದೇಶ ಈಡೇರುತ್ತದೆಯೇ ಎಂದು ಪ್ರಶ್ನಿಸಿದರು.