

ತುಮಕೂರು: ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ವತಿಯಿಂದ ಮಂಗಳವಾರ ರಾತ್ರಿ ತುಮಕೂರು ನಗರದ ಬಸ್ ನಿಲ್ದಾಣ, ರೇಲ್ಯೇ ಸ್ಟೇಷನ್ ಹಾಗೂ ಗುಡಿಸಲು ವಾಸಿಗಳಿಗೆ ಉಲ್ಲನ್ ಕಂಬಳಿ ಗಳನ್ನು ವಿತರಿಸಲಾಯಿತು.
ರೈಲ್ವೆ ನಿಲ್ದಾಣದಲ್ಲಿ ಕೊರೆಯುವ ಚಳಿಯಲ್ಲಿ ನಡುಗುತ್ತಾ ಮಲಗಿದ್ದ ನಿರ್ಗತಿಕರಿಗೆ ಸ್ವಾಮಿ ಜಪಾನಂದಜೀ ಒದಿಕೆ ಹೊದಿಸಿದರು.
ನಂತರ ದೂರದ ರಾಯಚೂರು, ಮಾನ್ವಿ, ಕಂಪ್ಲಿ ಪ್ರದೇಶಗಳಿಂದ ಜೀವನ ನಡೆಸಲು ಬಂದಂತಹ ಕೂಲಿ ಜನರಿಗೆ ತಮ್ಮ ಗುಡಿಸಲಿನ ಮುಂದೆಯೇ ಸನ್ಯಾಸಿಯೊಬ್ಬ ಬೆಚ್ಚನೆಯ ವುಲನ್ ಹೊದಿಕೆ ತಂದಿರುವುದು ಕೆಲವರ ಕಣ್ಣಿನಲ್ಲಿ ನೀರು ತಂದಿರಿಸಿದರೆ ಮತ್ತೆ ಕೆಲವರು ಇದು ಕನಸೇ ಎಂಬ ಸಂದೇಹ ಬಂದಿತು.
ಯಾವುದೇ ಕಟ್ಟಡವಿಲ್ಲದೆ, ವಿದ್ಯುತ್ ಸಂಪರ್ಕವಿಲ್ಲದೆ ಕೇವಲ ಗಿಡಿಸಿಲು ವಾಸಿಗಳಾದ ಇವರಿಗೆ ಪರಮಾಶ್ಚರ್ಯ ಕಾದಿತ್ತು. ಪ್ರತಿಯೊಬ್ಬರಿಗೂ ಅದರಲ್ಲಿಯೂ ಘರ್ಬಿಣಿ ಮಹಿಳೆಯರು, ವಯೋವ್ರುದ್ದರು ಹಾಗೂ ಎಲ್ಲಾ ಮಹಿಳೆ ಮತ್ತು ಪುರುಷರಿಗೆ ವುಲನ್ ಹೊದಿ ಕೆಗಳನ್ನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ವಿವಿ ಹಿರಿಯ ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರಶುರಾಮ್, ಹಿರಿಯ ಪ್ರಾಧ್ಯಾಪಕ ಡಾ.ರವೀಂದ್ರಕುಮಾರ್, ಆಶ್ರಮದ ಭರತ್ ರಾಮಮೂರ್ತಿ, ವೆಂಕಟೇಶ ಮುಕುಂದ, ವೀರೇಶ್ ಹಾಗೂ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಇದ್ದರು.