

ಮಧುಗಿರಿ: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯ ಪೊಲೀಸ್‌ಪೇದೆ ವೀರೇಶ್ ನೆರೆಯ ಅನಂತಪುರದಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಎರಡುವರೆ ವರ್ಷಗಳಿಂದ ಪೊಲೀಸ್ ಪೇದೆ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರೇಶ್, ಡಿ.7ರಂದು ಮಧುಗಿರಿ ತಾಲೂಕು ಬಿದರೆ ಕೆರೆಯ ಬಳಿ ದ್ವಿಚಕ್ರವಾಹನ, ಮೊಬೈಲ್ ಬಿಟ್ಟು ಕಾಣೆಯಾಗಿದ್ದರು.
ಅನಂತರಪುರದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಜತೆಯಲ್ಲಿ ವಾಸವಿದ್ದ ಕೊಪ್ಪಳ ಜಿ¯್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದ ವೀರೇಶ್ ಅವರನ್ನು ಮಂಗಳವಾರ ಮತ್ತೆಯಾಗಿದ್ದು ಠಾಣೆಗೆ ಕರೆದುಕೊಂಡು ಬರಲಾಗಿದೆ.
ಸಾಕಷ್ಟು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮನನೊಂದು ಹೋಗಿದ್ದರೆಂದು ಹೇಳಲಾಗುತ್ತಿದ್ದು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.