ಕಂಪನಹಳ್ಳಿ ಡೇರಿಯಲ್ಲಿ ಪರಸ್ಪರ ಬಡಿದಾಡಿಕೊಂಡ ಹಾಲು ಉತ್ಪಾದಕರು; ಪೊಲೀಸ್ ಬಂದೂಬಸ್ತ್

4HULIYAR6 (1)
Published on

ಹುಳಿಯಾರು: ಸಮೀಪದ ಕಂಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಟೆಸ್ಟರ್ ಹುದ್ದೆಯಲ್ಲಿ ಪತ್ನಿಯರ ಹೆಸರಿನಲ್ಲಿ ಪತಿಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ವಿಷಯ ವಿವಾದಕ್ಕೀಡಾಗಿದ್ದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಶುಕ್ರವಾರ ಸಂಜೆ ಡೇರಿಯಲ್ಲಿ ಎರಡು ಪ್ರತ್ಯೇಕ ಗುಂಪುಗಳ ನಡುವೆ ಡೇರಿಯಲ್ಲಿಯೇ ಜಗಳ ನಡೆದಿದ್ದು ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ಹತೋಟಿಗೆ ತಂದಿದ್ದಾರೆ.

ಮಹಿಳಾ ಸಹಕಾರ ಸಂಘವಾದ್ದರಿAದ ಅಲ್ಲಿನ ಸಿಬ್ಬಂದಿ ಕೂಡ ಮಹಿಳೆಯರೇ ಆಗಿರಬೇಕಾದ್ದು ನಿಯಮ ಆದರೆ, ಈ ಡೇರಿಯಲ್ಲಿ ಅಲಿಖಿತ ನಿಯಮ ಆರಂಭದಿAದಲೂ ಜಾರಿಯಲ್ಲಿದ್ದು ಕಾರ್ಯದರ್ಶಿ ಕೆಲಸವನ್ನು ಆಕೆಯ ಪತಿ, ಟೆಸ್ಟರ್ ಕೆಲಸವನ್ನು ಆಕೆಯ ಪುತ್ರ ನಿರ್ವಹಿಸುತ್ತಿದ್ದರು. ಈ ವಿಷಯವೀಗ ವಿವಾದಕ್ಕೆ ಕಾರಣವಾಗಿದೆ.

ಶೀಘ್ರದಲ್ಲಿಯೇ ನಡೆಯಲಿರುವ ಕಾರ್ಯಕಾರಿ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಡೇರಿಯಲ್ಲಿ ಎರಡು ಗುಂಪುಗಳಾಗಿದ್ದು ಪ್ರತಿದಿನ ಇದೇ ವಿಷಯವನ್ನಿಟ್ಟುಕೊಂಡು ಜಗಳ ನಡೆಯುತ್ತಿರುವುದು ಹಾಲು ಉತ್ಪಾದಕರಿಗೆ ತಲೆನೋವು ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net