ಒಕ್ಕಲಿಗ ಸಮುದಾಯಕ್ಕಿಲ್ಲ ಸರ್ಕಾರಿ ಸೌಲಭ್ಯ!: ಕೇಳೋರಿಲ್ಲ ಪ್ರಬಲ ಸಮುದಾಯದ ಗೋಳು

kannan-borwell-engineering-works-bangalore-0k9s4lcgki
Published on


ಸೋರಲಮಾವು ಶ್ರೀಹರ್ಷ ತುಮಕೂರು
ಒಕ್ಕಲಿಗ ಸಮುದಾಯದ ಬಡವರಿಗೆ ಕಳೆದೆರಡು ವರ್ಷದಿಂದ ಸರ್ಕಾರದ ಯೋಜನೆಯ ಫಲ ಇಲ್ಲದಂತಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದ್ದು, ಒಕ್ಕಲಿಗರಿಗೆ ಅವಕಾಶ ನಿರಾಕರಿಸಿದೆ.

2021ರಲ್ಲಿ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಬರೋಬ್ಬರಿ 500 ಕೋಟಿ ರೂ. ಮೀಸಲಿಟ್ಟು ೂಷಿಸಿದ್ದ "ಒಕ್ಕಲಿಗರ ಅಭಿವೃದ್ಧಿ ನಿಗಮ' ಸ್ಥಾಪಿಸಿದೆಯಾದರೂ ಈವರೆಗೂ ಅದು ಕಾರ್ಯಾರಂಭ ಆಗಿಲ್ಲ.

ನಿಗಮದ ಸ್ಥಾಪನೆಯನ್ನೇ ನೆಪವಾಗಿಟ್ಟುಕೊಂಡು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ನೀಡುತ್ತಿದ್ದ ಸೌಲಭ್ಯಕ್ಕೂ ಕತ್ತರಿ ಹಾಕಲಾಗಿದೆ. ಬಡ ಒಕ್ಕಲಿಗರು ಕಳೆದೆರಡು ವರ್ಷದಿಂದ ಗಂಗಾಕಲ್ಯಾಣ, ಸ್ವಯಂ ಉದ್ಯೋಗ ನೇರ ಸಾಲ, ಅರಿವು ಶೈಕ್ಷಣಿಕ ಸಾಲದಿಂದ ವಂಚಿತರಾಗಿದ್ದಾರೆ.

ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ಒಕ್ಕಲಿಗ ಸಮಾಜ ಹಿಂದಿನಿಂದಲೂ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಸೌಲಭ್ಯಗಳನ್ನು ಪಡೆಯುತ್ತಿತ್ತು ಆದರೆ, ತರಾತುರಿಯಲ್ಲಿ ೂಷಣೆಯಾದ ಒಕ್ಕಲಿಗ ಅಭಿವೃದ್ಧಿ ನಿಗಮ ಕಾರ್ಯಾರಂಭ ಮಾಡದೆ ಅಲ್ಲಿನ ಸೌಲಭ್ಯವನ್ನು ಕಿತ್ತುಕೊಂಡಿದೆ.

ತುಮಕೂರು ಸೇರಿದಂತೆ ಹಳೆಯ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದ್ದು ಸಂಖ್ಯೆಯೂ ದೊಡ್ಡದಾಗಿದೆ. ಸಮುದಾಯದ ಬಡ ರೈತರು ಗಂಗಾ ಕಲ್ಯಾಣದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳೂ ಶೈಕ್ಷಣಿಕ ಸಾಲವಿಲ್ಲದೆ ಉನ್ನತ ಶಿಕ್ಷಣ ಕೈಬಿಟ್ಟ ಉದಾಹರಣೆಗಳೂ ಇದೆ.

ಕಾಡುಗೊಲ್ಲರಿಗೂ ಇದೇ ಸಮಸ್ಯೆ!: ಒಕ್ಕಲಿಗ ಸಮುದಾಯದ ಬಡ ಜನರಿಗೆ ಆಗಿರುವ ತೊಂದರೆ ಕಾಡುಗೊಲ್ಲ ಸಮುದಾಯಕ್ಕೂ ಆಗಿದೆ. ಶಿರಾ ಉಪಚುನಾವಣೆ ಸಂದರ್ಭದಲ್ಲಿ ೂಷಣೆಯಾದ ಕಾಡುಗೊಲ್ಲ ಅಭಿವೃದ್ಧಿ ನಿಗಮ ಕಾರ್ಯಾರಂಭ ಮಾಡದೆ ಈ ಸಮುದಾಯದ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ. ಅಲೆಮಾರಿಗಳಿಗಿರುವ ಸೌಲಭ್ಯಗಳನ್ನು ಯಾದವ ಸಮುದಾಯ ಪಡೆಯಲು ಸಾಧ್ಯವಾಗಿದೆ. ಆದರೆ, ಕಾಡುಗೊಲ್ಲ ಎಂದು ಪ್ರಮಾಣಪತ್ರ ಹೊಂದಿರುವ ಬುಡಕಟ್ಟು ಸಮುದಾಯ ಕಳೆದೆರಡು ವರ್ಷದಿಂದ ಸರ್ಕಾರದ ಸೌಲಭ್ಯದಿಂದ ವಂಚಿತವಾಗಿದೆ. ಇಂತಹುದೇ ಸಮಸ್ಯೆ ಎದುರಿಸುತ್ತಿದ್ದ ಮರಾಠ ಸಮುದಾಯ ಇತ್ತೀಚೆಗಷ್ಟೇ ನಿಗಮದ ಮೂಲಕ ಅರ್ಜಿ ಆಹ್ವಾನಿಸಿದೆ.

ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸೌಲಭ್ಯಗಳಿಗೆ ಒಕ್ಕಲಿಗರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ತುಮಕೂರು ಜಿಲ್ಲೆಯಲ್ಲಿ ಕಳೆದೆರಡು ವರ್ಷದಿಂದ ಒಕ್ಕಲಿಗರಿಗೆ ಯಾವುದೇ ಸೌಲಭ್ಯ ನೀಡಿಲ್ಲ.

ಭಕ್ತಕುಚೇಲ ಜಿಲ್ಲಾ ವ್ಯವಸ್ಥಾಪಕ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

ಒಕ್ಕಲಿಗರ ಅಭಿವೃದ್ಧಿ ನಿಗಮ ಕಾರ್ಯಾರಂಭ ಮಾಡಿದ್ದರೆ ಸಮುದಾಯದ ಬಡ ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು. ನಿಗಮ ಆರಂಭವಾಗದಿದ್ದರೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಸೌಲಭ್ಯ ನಿಲ್ಲಿಸಿರುವುದು ಅವೈಜ್ಞಾನಿಕ. ಒಕ್ಕಲಿಗ ಸಮುದಾಯಗಳಿಗಾದ ಅನ್ಯಾಯ.

ಮಂಜುನಾಥ್​ ಅಧ್ಯಕ್ಷ, ಸರ್ಪ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net