ಗ್ರಾಹಕ ಸೇವೆ ರ್ನಿಲಕ್ಷಿಸಿದ್ದ ಅಡುಗೆ ಅನಿಲ ಏಜೆನ್ಸಿಗೆ ದಂಡ

lpg
Published on

ತುಮಕೂರು: ಗ್ರಾಹಕ ಸೇವೆ ರ್ನಿಲಕ್ಷಿಸಿದ್ದ ಅಡುಗೆ ಅನಿಲ(ಎಲ್​ಪಿಜಿ ಸಿಲಿಂಡರ್​) ಏಜೆನ್ಸಿಗೆ ತುಮಕೂರು ಜಿಲ್ಲಾ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಊರ್ಡಿಗೆರೆ ಹೋಬಳಿ ಕದರನಹಳ್ಳಿ ತಾಂಡ್ಯದ ವಕೀಲ ಎಲ್​.ರಮೇಶ್​ ನಾಯಕ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಕ್ಯಾತಸಂದ್ರದ ಶಮಿಕಾ ಇಂಡಿಯನ್​ ಏಜೆನ್ಸಿಗೆ 33000 ರೂ ದಂಡ ವಿಧಿಸಿ 45 ದಿನದೊಳಗೆ ಪಾವತಿಸುವಂತೆ ನಿರ್ದೇಶಿಸಿದೆ.

ಸಿಲೆಂಡರ್​ನಿಂದ ಸ್ಟವ್​ಗೆ ಸಂಪರ್ಕಿಸುವ ಪೈಪ್​ನಲ್ಲಿ (ರಬ್ಬರ್​ ಟ್ಯೂಬ್​) (ವೋಸ್​ ಆ್ಯಪ್​) ಸೋರಿಕೆಯಾಗಿ ವಾಸನೆ ಬರುತ್ತಿದೆ ಎಂದು ಏಜೆನ್ಸಿಗೆ ದೂರು ನೀಡಿದ್ದರೂ ಸ್ಪಂದಿಸಿರಲಿಲ್ಲ. 2017&2022ರ ಅವಧಿಯ ಪೈಪ್​ ಬಳಕೆ ಯೋಗ್ಯ ಅವಧಿ 5 ವರ್ಷ ಮೀರಿ ಹೆಚ್ಚುವರಿ 2 ವರ್ಷ ಕಳೆದಿತ್ತು. ಅಪಾಯಕಾರಿ ಎಂದು ಏಜೆನ್ಸಿಗೆ ದೂರು ನೀಡಿ ತಿಂಗಳು ಕಳೆದರೂ ಪೈಪ್​ ಬದಲಿಸದೇ ಏಜೆನ್ಸಿ ರ್ನಿಲಕ್ಷ$್ಯ ಈ ಬಗ್ಗೆ ಆನ್​ಲೈನ್​ನಲ್ಲಿ ಇಂಡಿಯನ್​ ಆಯಿಲ್​ ಕಾಪೋರ್ರೇಷನ್​ಗೆ ದೂರು ಸಲ್ಲಿಸಿದ್ದರು.

ಏಜೆನ್ಸಿ ಮತ್ತು ಕಾರ್ಪೊರೇಷನ್​ಗೆ ನೋಟಿಸ್​ ನೀಡಿದ್ದರು ಸ್ಪಂದಿಸದೇ ಇದ್ದಾಗ ಜೀವದ ಜತೆ ಚೆಲ್ಲಾಟ ಆಡುವ ರ್ನಿಲಕ್ಷ$್ಯ ಧೋರಣೆ ಖಂಡಿಸಿ ರಮೇಶ್​ ನಾಯಕ್​ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೆ ಮನೆ ಮನೆಗೆ ಸಿಲೆಂಡರ್​ ಪೂರೈಕೆಗೆ 50 ರೂ. ಹೆಚ್ಚುವರಿ ಹಣ ಪಡೆಯುವುದನ್ನು ಪ್ರಶ್ನಿಸಿದ್ದರು.

ಪೈಪ್​ ಬದಲಿಸಲು ಜೀವ ಹಾನಿ ಮಾಡುವಂತಹ ರ್ನಿಲಕ್ಷ$್ಯ ಹಾಗೂ ಹೆಚ್ಚುವರಿ ಹಣ ಪಡೆಯುವುದನ್ನು ಜಿಲ್ಲಾ ಗ್ರಾಹಕರ ನ್ಯಾಯಲಯ ಆಕ್ಷೇಪಿಸಿದೆ. ರ್ನಿಲಕ್ಷ$್ಯ ಮತ್ತು ಜೀವ ಭಯದಲ್ಲಿ ಗ್ರಾಹಕರ ಮಾನಸಿಕ ವೇದನೆಗೆ ಪರಿಹಾರವಾಗಿ 25000 ಹಾಗೂ ವ್ಯಾಜ್ಯ ವೆಚ್ಚವಾಗಿ 8000 ರೂ. ನೀಡುವಂತೆ ತೀರ್ಪು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net