ಖುರ್ಚಿಗಾಗಿ ನಾಯಕರಲ್ಲಿ ಕಿತ್ತಾಟವಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸ್ಪಷ್ಟನೆ

3
Published on


ಕುಣಿಗಲ್​: ಮುಖ್ಯಮಂತ್ರಿ ಖುರ್ಚಿಗಾಗಿ ಕಾಂಗ್ರೆಸ್​ ನಾಯಕರಲ್ಲಿ ಕಿತ್ತಾಟವಿಲ್ಲ. ಹಿಂಬಾಲಕರು ಈ ರೀತಿ ಮಾತನಾಡಿಕೊಳ್ಳುತ್ತಿದ್ದು, ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದನ್ನು ಕೆಪಿಸಿಸಿ ಸರಿಪಡಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ತಾಲೂಕಿನ ಕೊತ್ತೆಗೆರೆ ಹೋಬಳಿ ದೇವರಮೂಲೆ ಗಿಡಪಾಳ್ಯದಲ್ಲಿ ಶಾಸಕ ಡಾ.ಎಚ್​.ಡಿ.ರಂಗನಾಥ ನೇತೃತ್ವದಲ್ಲಿ ಸ್ವಾತಂತ್ರ ಅಮೃತ ಮಹೋತ್ಸವ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಸ್ವಾತಂತ್ರೊ$್ಯತ್ಸವ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​ ಅವರು ಎಲ್ಲೂ ಮಾತನಾಡುತ್ತಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.

ಪಾದಯಾತ್ರೆ: ಸ್ವತಂತ್ರಕ್ಕಾಗಿ ಹೋರಾಟ ಮಾಡಿ, ಬಲಿದಾನ ಮಾಡಿದವರ ತ್ಯಾಗವನ್ನು ಯುವಜನತೆಗೆ ತಿಳಿಸುವ ನಿಟ್ಟಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ ಬಳಿಕ ಮಾಜಿ ಪ್ರಧಾನಿ ಜವಾಹರ್​ಲಾಲ್​ ನೆಹರು ಅವರಿಂದ ಹಿಡಿದು ಮನಮೋಹನ್​ ಸಿಂಗ್​ ಹಾಗೂ ರಾಜ್ಯದಲ್ಲಿ ಕೆ.ಸಿ.ರೆಡ್ಡಿಯವರಿಂದ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಕಾಂಗ್ರೆಸ್​ ನೀಡಿದ ಕೊಡುಗೆಗಳನ್ನು ಜನತೆಗೆ ತಿಳಿಸಲಾಗುತ್ತದೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಮನಮೋಹನ್​ಸಿಂಗ್​ ಆಡಳಿತಾವಧಿಯಲ್ಲಿ ದೇಶದಲ್ಲಿ 25 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದರು. ಮೋದಿ ಆಡಳಿತದಲ್ಲಿ ಅಷ್ಟೇ ಸಂಖ್ಯೆಯಲ್ಲಿ ಬಡತನ ರೇಖೆಗಿಂತ ಕೆಳಗೆ ಇಳಿದಿದ್ದಾರೆ. ಬಡವರನ್ನು ಮೇಲೆತ್ತುವಂಥ ಕೆಲಸ ಮಾಡದೆ ಅದಾನಿ, ಅಂಬಾನಿ ಅವರ ಸಾಲಮನ್ನಾ ಮಾಡುತ್ತಿದ್ದಾರೆ ಎಂದು ದೂರಿದರು.150 ಲಕ್ಷ ಕೋಟಿ ರೂ. ಸಾಲದ ಆತಂಕ: 1947 ರಿಂದ 2014ರವರೆಗೂ ದೇಶದಲ್ಲಿ 53 ಲಕ್ಷ ಕೋಟಿ ರೂ. ಸಾಲ ಇತ್ತು. ಆದರೆ ನರೇಂದ್ರ ಮೋದಿ ಅಡಳಿತದಲ್ಲಿ 150 ಲಕ್ಷ ಕೋ.ರೂ. ಗೂ ಅಧಿಕ ಸಾಲ ಮಾಡಿದ್ದಾರೆ. ಒಬ್ಬ ವ್ಯಕ್ತಿಯ ಮೇಲೆ 1.75 ಲಕ್ಷ ಸಾಲದ ಹೊರೆ ಹೊರಿಸಿದ್ದಾರೆ. ಇದು ಹೀಗೆ ಮುಂದುವರಿದರೆ ಭಾರತ ಶ್ರೀಲಂಕಾ ದೇಶವನ್ನು ಮೀರಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಸರ್ವಾಧಿಕಾರ ಧೋರಣೆ: ಬಿಜೆಪಿ ವಿರುದ್ಧವಾಗಿ ಧ್ವನಿ ಎತ್ತಿದ 570ಕ್ಕೂ ಅಧಿಕ ಪ್ರತಿಪಕ್ಷ ನಾಯಕರ ವಿರುದ್ಧ ಐಟಿ, ಇಡಿ, ಸಿಬಿಐ ಪ್ರಕರಣ ದಾಖಲಿಸುತ್ತಿದ್ದಾರೆ. ಬಿಜೆಪಿಗೆ ಇದೊಂದು ಚಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆರುಗು: ಪಾದಯಾತ್ರೆಗೆ ಡೊಳ್ಳು ಕುಣಿತ, ದೇವರ ಕುಣಿತ, ಸೋಮನಕುಣಿತ ಮೆರುಗು ನೀಡಿದವು. ಕಳಸ ಹೊತ್ತ ನೂರಾರು ಮಹಿಳೆಯರು ನಾಯಕರನ್ನು ಸ್ವಾಗತಿಸಿದರು. ತಾಪಂ ಮಾಜಿ ಸದಸ್ಯರಾದ ಗಂಗರಂಗಯ್ಯ, ಐ.ಎ.ವಿಶ್ವನಾಥ್​, ಬಿ.ಕೆ.ರಾಮಣ್ಣ, ಪುರಸಭೆ ಸದಸ್ಯರಾದ ರಾಮಣ್ಣ, ಎಸ್​.ಕೆ.ನಾಗೇಂದ್ರ, ಮಾಜಿ ಸದಸ್ಯರಾದ ಪಾಪಣ್ಣ, ಶಂಕರ್​, ಮುಖಂಡರಾದ ಕೆಂಪೀರೆಗೌಡ, ಸ್ವಾಮಿ ಹಾಲುವಾಗಿಲು, ಶಿವಶಂಕರ್​, ಸುಂದರಕುಪ್ಪೆ ಪಾಪಣ್ಣ. ಕೋಟ್ಟರಾಜಣ್ಣ ಇತರರು ಇದ್ದರು.

ರಾಷ್ಟ್ರಕ್ಕೆ ಕಾಂಗ್ರೆಸ್​ ಕೊಡುಗೆ ಹಾಗೂ ೇತ್ರಕ್ಕೆ ಸಂಸದ ಡಿ.ಕೆ.ಸುರೇಶ್​, ಶಾಸಕ ಡಾ.ರಂಗನಾಥ್​ ಅವರು ಕೊಟ್ಟಿರುವ ಸೇವೆ ಜನ ಸಾಮಾನ್ಯರಿಗೆ ತಿಳಿಸಲು ಈ ಕಾರ್ಯಕ್ರಮ ಪೂರಕವಾಗಿದೆ.

ಜಗದೀಶ್​ ಅನಂತಯ್ಯ, ವಕೀಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net