

ತುಮಕೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಬ್ಬರು ಜುಟ್ಟು ಹಿಡಿದು ಬಡಿದಾಡಿಕೊಂಡ ವೀಡಿಯೋ ವೈರಲ್ ಆಗಿದೆ.
ಸಹ ಪ್ರಯಾಣಿಕರು, ಕಂಡಕ್ಟರ್, ಚಾಲಕನ ಮನವಿಗೂ ಕಿವಿಗೊಡದೆ ಪ್ರಯಾಣಿಕರು ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್ ತುಮಕೂರು ನಗರಕ್ಕೆ ಆಗಮಿಸಿದ್ದಾಗ ಮಾರ್ಗಮಧ್ಯೆ ಹೋಟೆಲ್ ಬಳಿ ಸೀಟಿನಲ್ಲಿದ್ದ ಮಹಿಳೆಯೊಬ್ಬರು ಶೌಚಾಲಯಕ್ಕೆ ತೆರಳಿದ್ದರು. ಮತ್ತೆ ಬಂದಾಗ ಬೇರೊಬ್ಬರು ಅವರ ಸೀಟಿನಲ್ಲಿ ಬಂದು ಕುಳಿತಿದ್ದ ಕಾರಣಕ್ಕೆ ಆರಂಭವಾದ ಜಗಳ ಆರಂಭವಾಗಿದೆ.
ಜಗಳ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಅಸಹಾಯಕರಾದ ಬಸ್ ಚಾಲಕ ತುಮಕೂರು ನಗರ ಪೊಲೀಸ್ ಠಾಣೆ ಮುಂದೆ ಬಸ್ ತೆಗೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ.