

ತುಮಕೂರು: ಜಿಲ್ಲಾಡಳಿತದ ವತಿಯಿಂದ ನ.18ರಂದು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ "ಸಂತಶ್ರೇಷ್ಠ ಕನಕದಾಸರ 537ನೇ ಜಯಂತ್ಯುತ್ಸವ” ಕಾರ್ಯಕ್ರಮ ಆಯೋಜಿಸಲಾಗಿದೆ.
ಜಯಂತ್ಯುತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮುದಾಯದ 10 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ರಂಗಭೂಮಿ ಕ್ಷೇತ್ರದಲ್ಲಿ ನಗರದ ಪ್ರಗತಿ ಬಡಾವಣೆಯ ಟಿ.ಹೆಚ್.ಹನುಮಂತಪ್ಪ, ಲಿಂಗಾಪುರದ ಶಿವಣ್ಣ, ಹರಳಕಟ್ಟೆಯ ಚಿಕ್ಕಲಿಂಗಯ್ಯ, ಸಮಾಜ ಸೇವೆ ಕ್ಷೇತ್ರದಲ್ಲಿ ತುಮಕೂರು ಮೆಳೆಕೋಟೆಯ ಮಾಜಿ ಸಿಎಂಸಿ ಸದಸ್ಯ ಎಂ.ಪಿ.ರಮೇಶ್ ಹಾಗೂ ವಕೀಲ ಆರ್.ತಿಪ್ಪೇಸ್ವಾಮಿ.
ಚಿಕ್ಕನಾಯಕನಹಳ್ಳಿ ತಾಲೂಕು ಕಾಳಮ್ಮನಗುಡಿ ಬೀದಿಯ ಸಿ.ಎಲ್.ರವಿಕುಮಾರ್, ಪಾವಗಡ ತಾಲೂಕು ಕಾಳಿದಾಸ ನಗರದ ಜಿಪಂ ಸದಸ್ಯ ಪೂಜಾರಿ ಚೌಡಪ್ಪ, ವೈದ್ಯಕೀಯ ಕ್ಷೇತ್ರದಲ್ಲಿ ತುಮಕೂರಿನ ಡಾ.ಟಿ.ಎಸ್.ಶಶಿಧರ್, ಕ್ರೀಡಾ ಕ್ಷೇತ್ರದಲ್ಲಿ ತುಮಕೂರಿನ ಎಂ.ಪಿ.ಕುಮಾರಸ್ವಾಮಿ(ಪುಟ್ಟಪ್ಪ), ಶಿಕ್ಷಣ ಕ್ಷೇತ್ರದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಡಾ.ಕೆ.ಜಿ.ಪರಶುರಾಮ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.