ಉನ್ನತ ಶಿಕ್ಷಣದ ಜತೆಗೆ ಎಚ್‌ಸಿಎಲ್ ಟೆಕ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ

job
Published on

ತುಮಕೂರು: ಕೌಶಲಾಭಿವೃದ್ಧಿ, ಉದ್ಯಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಪಿಯು ಶಿಕ್ಷಣ ಇಲಾಖೆ ಹಾಗೂ ಎಚ್‌ಸಿಎಲ್ ಟೆಕ್ ಸಹಯೋಗದಲ್ಲಿ ಆರಂಭಿಕ ವೃತ್ತಿ ಜೀವನದ ಕಾರ್ಯಾಕ್ರಮ HCL TechBee ತರಬೇತಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಆಗಸ್ಟ್ 10 ರಂದು ಬೆಳಗ್ಗೆ 9.30ಕ್ಕೆ ನಗರದ ಎಂಪ್ರೆಸ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

2021-22 ಮತ್ತು 2022-23ನೇ ಸಾಲಿನಲ್ಲಿ ದ್ವಿತೀಯ ಪಿಯು ಪಾಸಾದ ವಿದ್ಯಾರ್ಥಿಗಳಿಗೆ 12ತಿಂಗಳ ತರಬೇತಿ, ನಂತರದಲ್ಲಿ ಉನ್ನತ ಶಿಕ್ಷಣದ ಜತೆಗೆ ಎಚ್‌ಸಿಎಲ್ ಟೆಕ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ದ್ವಿತೀಯ ಪಿಯುಸಿ ಅಂಕಪಟ್ಟಿ ಪ್ರತಿಯೊಂದಿಗೆ ಕಾರ್ಯಾಗಾರ ಆಗಮಿಸಿ

https://bit.ly/TechBeeKSDC ಲಿಂಕ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಹಾಜರಾಗಬಹುದು.

ಮಾಹಿತಿಗೆ ಮೊ.9019817433, 8722790340, 6362143514 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net