ಕಾಂಗ್ರೆಸ್ ಮೊದಲಪಟ್ಟಿಯಲ್ಲಿರುವ ಜಿಲ್ಲೆಯ ಅಭ್ಯರ್ಥಿಗಳಾರು?

Congress
Published on

ತುಮಕೂರು: ಇಂದು ಯುಗಾದಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಎಂಬ ಸುದ್ದಿ ಜಿಲ್ಲಾ ಕಾಂಗ್ರೆಸ್ ಪಾಳಯವೂ ಸೇರಿದಂತೆ ಜಿಲ್ಲೆಯೆಲ್ಲೆಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು ಇಂದು ಕಾಂಗ್ರೆಸ್ ಬಿಡುಗಡೆ ಮಾಡಲಿರುವ ಮೊದಲ ಪಟ್ಟಿಯಲ್ಲಿ ಯಾವ ಕ್ಷೇತ್ರಗಳಿರಲಿದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ಕೈ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳೂ ಕೂಡ ಮೊದಲಪಟ್ಟಿಯಲ್ಲಿ ಸ್ಥಾನ ಪಡೆದು ಕ್ಷೇತ್ರದಲ್ಲಿ ಗೊಂದಲ ನಿವಾರಿಸಿಕೊಂಡು ಪಕ್ಷ ಸಂಘಟನೆ ಚುರುಕಾಗಿಸುವ ಕಾತುರದಲ್ಲಿದ್ದು ಬಹುತೇಕ ಇಂದೇ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.

ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ್ ಸ್ಫರ್ಧಿಸುವ ಕೊರಟಗೆರೆ, ಹಾಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ಸ್ಫರ್ಧಿಸುವ ಕುಣಿಗಲ್, ಮಾಜಿ ಶಾಸಕ ಕೆ.ಎನ್.ರಾಜಣ್ಣಗೆ ಮಧುಗಿರಿ ಹಾಗೂ ಬೆಮೆಲ್ ಕಾಂತರಾಜು ಟಿಕೆಟ್ ಬಯಸಿರುವ ತುರುವೇಕೆರೆ ಕ್ಷೇತ್ರಗಳಲ್ಲಿ ಒಂದೇ ಹೆಸರುಗಳಿದ್ದು ಮೊದಲಪಟ್ಟಿಯಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net