

ತುಮಕೂರು: ದೇಶದಲ್ಲಿ ನಂಬರ್ ಒನ್ ಗೃಹ ಸಚಿವ ಸ್ಥಾನದಲ್ಲಿರೋದು ನಾನು ಪರಮೇಶ್ವರ್, ಅವರಿಗೆ ಚಾಟ್ ಜಿಪಿಟಿ ನೋಡಲಿಕ್ಕೆ ಹೇಳಿ.. ಹೀಗೆಂದು ತುಮಕೂರಿನಲ್ಲಿ ತಮಗೆ ತಾವೇ ಹೊಗಳಿಕೊಂಡಿದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ.
ಸಾಮಾಜಿಕ ಜಾಲತಾಣದಲ್ಲಿ "ನನಗೇನು ಗೊತ್ತಿಲ್ಲ' ಗೃಹ ಸಚಿವ ಎಂಬ ಹೇಳಿಕೆ ವೈರಲ್ ಆಗುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಕೆಂಡಾಮಂಡಲರಾದ ಪರಮೇಶ್ವರ್, ಹೇಳ್ಕೊಳ್ಳಿ ಬಿಡ್ರಿ.., ಇಡೀ ದೇಶದಲ್ಲಿ ಪ್ರಥಮ ಸ್ಥಾನದಲ್ಲಿರುವ ಗೃಹ ಸಚಿವ ಇರೋದು ಡಾ.ಜಿ.ಪರಮೇಶ್ವರ್, ಅವರಿಗೆ ನೋಡಲಿಕ್ಕೆ ಹೇಳಿ ಎಂದರು.
ಗೊತ್ತಿಲ್ಲ ಅಂತಾ ಹೇಳಿದ್ರೆ? ನೀವು(ಪತ್ರಕರ್ತರು) ಪ್ರಶ್ನೆ ಕೇಳ್ತಿರಾ ಎಲ್ಲದಕ್ಕೂ ಹೇಳೊಕಾಗುತ್ತಾ, ಸ್ವಾಭಾವಿಕವಾಗಿ ಗೊತ್ತಿಲ್ಲ ಅಂತಾ ಹೇಳ್ತಿನಿ...ಯಾಕಂದ್ರೆ ಗೊತ್ತಿರೊದಿಲ್ಲ! ಗೃಹ ಸಚಿವನಾಗಿ ನನಗೆ ಜವಾಬ್ದಾರಿ ಇರುತ್ತೆ, ಗೊತ್ತಿಲ್ಲದೆ ಇರೋದನ್ನ ಹೇಳೋಕಾಗೊದಿಲ್ಲ. ಅದಕ್ಕೆ ಅನೇಕ ಸಂದರ್ಭದಲ್ಲಿ ಗೊತ್ತಿಲ್ಲ ಅಂತಾ ಹೇಳ್ತಿನಿ, ಟ್ರೊರ್ಲಸ್ ಚಾಟ್ ಜಿಪಿಟಿ ನೋಡಲಿಕ್ಕೆ ಹೇಳಿ ಎಂದು ಸಿಟ್ಟಾದರು.
ಪತ್ರಕರ್ತರಿಗೆ ವಾರ್ನ್ ವಿಷಯವನ್ನು ತಮಾಷೆಗೆ ಹೇಳಿದ್ದೇನೆ, ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ನಮ್ಮ ಜಿಲ್ಲೆಯ ಮರ್ಯಾದೆಯ ಪ್ರಶ್ನೆ ಎಂದು ಹೇಳಿದ್ದೇನೆ ಎಂದು ತಿಪ್ಪೇಸಾರಿಸಿದರು.
ಬಿಜೆಪಿ ಮುಖಂಡರು ಧರ್ಮಸ್ಥಳ ಚಲೋ ಮಾಡುತ್ತಿರುವ ವಿಷಯ ತಿಳಿಯಿತು, ಹೋಗಲಿ ಮಂಜುನಾಥನ ದರ್ಶನ ಪಡೆದುಕೊಂಡು ಬರಲಿ, ನಾನು ಕೂಡ ಅವರಿಗೆ ಮಂಜುನಾಥಸ್ವಾಮಿ ಆಶಿರ್ವಾದ ಮಾಡಲಿ ಎಂದು ನಾನು ಬಯಸುತ್ತೇನೆ. ಡಾ.ಜಿ.ಪರಮೇಶ್ವರ ಗೃಹ ಸಚಿವ