

ತುಮಕೂರು: ಪತ್ನಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆಗೈದು ತಲೆ ಮರೆಸಿಕೊಂಡಿದ್ದ ಆರೋಪಿ ಪತಿಯನ್ನು ನೊಣವಿನಕೆರೆ ಪೊಲೀಸರು 27 ವರ್ಷದ ನಂತರ ಪತ್ತೆಮಾಡಿ ಬಂಧಿಸಿದ್ದಾರೆ.
ತಿಪಟೂರು ತಾಲೂಕು ಕುಡುವನಘಟ್ಟದ ನಿಂಗಪ್ಪ(62) ಆತನ ಪತ್ನಿ ಗೌರಮ್ಮನನ್ನು 1997 ಮೇ.4ರಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದನು.
ತನ್ನ 35ನೇ ವರ್ಷದಲ್ಲಿ ಊರು ಬಿಟ್ಟು ಹೋಗಿದ್ದ ನಿಂಗಪ್ಪ ಈಗ 62ನೇ ವಯಸ್ಸಿನಲ್ಲಿ ಊರಿಗೆ ವಾಪಸಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕುಡುವನಘಟ್ಟದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.