ನಿಗಿನಿಗಿಸುವ ಕೆಂಡದ ಮೇಲೆ ಕಳಸ ಹೊತ್ತ ಬಾಲಕಿ

2HULIYAR2
Published on

ಹುಳಿಯಾರು: ಹುಳಿಯಾರು ಹೋಬಳಿ ದೊಡ್ಡಬಿದರೆ ಶ್ರೀಪಾತಲಿಂಗೇಶ್ವರಸ್ವಾಮಿ, ಲಕ್ಕಮ್ಮದೇವಿ ಹಾಗೂ ಶ್ರೀಕರಿಯಮ್ಮ, ಬೇವಿನಳಮ್ಮ ದೇವಿಯವರ ದೊಡ್ಡ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರದಂದು ಕೆಂಡದ ಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಪಾತಲಿಂಗೇಶ್ವರಸ್ವಾಮಿ, ಲಕ್ಕಮ್ಮದೇವಿ, ಬೇವಿನಳ್ಳಮ್ಮ ದೇವಿ ಹಾಗೂ ದೂತರಾಯನೊಂದಿಗೆ ಅಲಂಕೃತ ಕರಿಯಮ್ಮನನ್ನು ಕಳಸ ಹೊತ್ತ ಹುಡುಗಿಯೊಂದಿಗೆ ಉರೊಳಗಿನ ದೇವಸ್ಥಾನದಿಂದ ನಡೆಮುಡಿ ಹಾಗೂ ಮೆರವಣಿಗೆಯಲ್ಲಿ ಸುಮಾರು ಎರಡು ಕಿಮೀ ದೂರದ ಬಾರೆಯಲ್ಲಿರುವ ಉದ್ಭವ ಬೇವಿನಹಳ್ಳಿ ಅಮ್ಮನವರ ಮೂಲಸ್ಥಾನಕ್ಕೆ ಕರೆತರಲಾಯಿತು.

ಅಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದ ನಂತರ ವಾದ್ಯಮೇಳದ ಹಿಮ್ಮೇಳದೊಂದಿಗೆ ದೇವಾಲಯದ ಮುಂದೆ ನಿಗಿನಿಗಿಸುವ ಕೆಂಡದ ಮೇಲೆ ಕಳಸ ಹೊತ್ತ ಬಾಲಕಿ ಹಾದ ನಂತರ ಕರಿಯಮ್ಮನೊಟ್ಟಿಗೆ ಎಲ್ಲಾ ದೇವರುಗಳನ್ನು ಕೆಂಡ ಹಾಯಿಸಲಾಯಿತು. ನಂತರ ಮಕ್ಕಳು, ಮಹಿಳೆಯರು, ವೃದ್ಧರೂ ಸಹ ಭಕ್ತಿಭಾವದಿಂದ ಕೆಂಡ ಹಾಯ್ದರು.

ಮಹಿಳೆಯರು ತಾವು ಮಡಿಯಲ್ಲಿ ಮಾಡಿ ತಂದಿದ್ದ ತಂಬಿಟ್ಟಿನ ಆರತಿ ಬೆಳಗುವುದರ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net