ಅಪಘಾತದಲ್ಲಿ ಹುಳಿಯಾರು ಪಪಂ ಸದಸ್ಯ ನಿಧನ

15HULIYAR6
Published on

ಹುಳಿಯಾರು:ಹುಳಿಯರು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಳಗೇರೆಹಳ್ಳಿ ಚಂದ್ರಶೇಖರ್​ರಾವ್​ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ನಿಧನರಾಗಿದ್ದಾರೆ.

ಹುಳಿಯಾರ್​ನಿಂದ ಕೋಡಿಪಾಳ್ಯದ ಪೆಟ್ರೋಲ್​ ಬಂಕ್​ ಗೆ ಪೆಟ್ರೋಲ್​ ಹಾಕಿಸಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಕೋಡಿಪಾಳ್ಯದಬಳಿ ಅಳವಡಿಸಿರುವ ರಸ್ತೆ ಹಂಪ್​ ಎಗರಿ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತ ರಕ್ತಸ್ರಾವವಾಗಿ ಹುಳಿಯಾರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ತೆರಳುತ್ತಿರುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಮೃತರಿಗೆ ಪತ್ನಿ ಹಾಗೂ ಮಗ, ಮಗಳು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net