

ತುಮಕೂರು: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇವೆ ಖಾಯಮಾತಿಗೆ ಆಗ್ರಹಿಸಿ ತರಗತಿಗಳನ್ನು ಭಹಿಷ್ಕರಿಸಿ ಧರಣಿ ಆರಂಭಿಸಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಸ್ಥಗಿತವಾಗಿವೆ.
ಜಿಲ್ಲೆಯೆಲ್ಲೆಡೆಯಿಂದ ತರಗತಿಗಳನ್ನು ಬಿಟ್ಟು ಆಗಮಿಸಿದ್ದ ನೂರಾರು ಅತಿಥಿ ಉಪನ್ಯಾಸಕರು ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೂ ಶುಕ್ರವಾರ ಮೆರವಣಿಗೆಯಲ್ಲಿ ತೆರಳಿ ಧರಣಿ ಆರಂಭಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ ಮಾತನಾಡಿ, ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗ ಎನ್ನಿಸಿರುವ ಅತಿಥಿ ಉಪನ್ಯಾಸಕರಿಗೆ ಇದು ಅಳಿವು, ಉಳಿವಿನ ಹೋರಾಟವಾಗಿದೆ ಎಂದರು.
ಅತಿಥಿ ಉಪನ್ಯಾಸಕಿ ಡಾ.ಕವಿತಾ, ಕೆಂಚರಾಯಪ್ಪ ಮತ್ತಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿ.ಹೇಮಾವತಿ, ಅನಿತಾ, ಅಂಬಿಕಾ, ಭವ್ಯ, ಗಿರೀಶ್, ರ‍್ರಿಸ್ವಾಮಿ ವೇದಮೂರ್ತಿ, ಡಾ.ಶಿವಣ್ಣ ತಿಮ್ಮಲಾಪುರ, ಶಂಕರಪ್ಪ, ಶಶಿ, ಚಿತ್ತಯ್ಯ, ಕಾಂತರಾಜು, ಮಲ್ಲಿಕಾರ್ಜುನ್, ಭಾನುಪ್ರಕಾಶ್ ಮತ್ತಿತರರು ನೇತೃತ್ವ ಇದ್ದರು.